ಕರಾವಳಿಗೂ ವಿಸ್ತರಿಸಿ 'ವಂದೇ ಭಾರತ್​' ರೈಲು

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವಂದೇ ಭಾರತ್​ ರೈಲು ಓಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​ ಅವರಿಗೆ ಕೋಟ ಶ್ರೀನಿವಾಸ ಪೂಜಾರಿ ನವದೆಹಲಿಯಲ್ಲಿ ಮನವಿ ನೀಡಿದರು.
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವಂದೇ ಭಾರತ್​ ರೈಲು ಓಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​ ಅವರಿಗೆ ಕೋಟ ಶ್ರೀನಿವಾಸ ಪೂಜಾರಿ ನವದೆಹಲಿಯಲ್ಲಿ ಮನವಿ ನೀಡಿದರು.
Published on

* ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​ಗೆ ಸಂಸದ ಕೋಟ ಮನವಿ

* ಕೊಂಕಣ ರೈಲ್ವೆ ಮಾರ್ಗ ದ್ವಿಪಥ ಮಾಡಲು ಒತ್ತಾಯ

ಉಡುಪಿ: ಬೆಂಗಳೂರಿನಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡದವರೆಗೂ ವಂದೇ ಭಾರತ್​ ರೈಲು ವಿಸ್ತರಿಸಬೇಕು. ಅಲ್ಲದೆ, ಕೊಂಕಣ ರೈಲ್ವೆ ಮಾರ್ಗದ ಹಳಿಯನ್ನು ದ್ವಿಪಥ ಮಾಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರಿಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
ನವದೆಹಲಿಯ ಕಚೇರಿಯಲ್ಲಿ ರೈಲ್ವೆ ಸಚಿವರನ್ನು ಮಂಗಳವಾರ (ಫೆ.3) ಭೇಟಿ ಮಾಡಿ ಚರ್ಚಿಸಿದ ಕೋಟ ಪೂಜಾರಿ, ಈ ವಿಚಾರವಾಗಿ ಶ್ರೀ ಕ್ರಮ ಕೈಗೊಳ್ಳವಂತೆ ಮನವಿ ನೀಡಿದರು.

ಪ್ರಯಾಣಿಕರಿಗೆ ಅನುಕೂಲ

ಪ್ರತಿದಿನವೂ ಉತ್ತರ ಕನ್ನಡ, ಕುಂದಾಪುರ, ಉಡುಪಿ, ಮಂಗಳೂರು ಜಿಲ್ಲೆಯಿಂದ 600ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಬಸ್​ಗಳು ರಾಜಧಾನಿ ಬೆಂಗಳೂರಿಗೆ ತೆರಳುತ್ತವೆ. ಆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗುವಂತಾಗಲು ಕನಾಟಕದ ಕರಾವಳಿ ಭಾಗಕ್ಕೂ ವಂದೇ ಭಾರತ್​ ರೈಲು ಬಿಡುಗಡೆ ಮಾಡಬೇಕು ಎಂದು ವಿನಂತಿಸಿದರು.

* ಟ್ರ್ಯಾಕ್ ಡಬ್ಲಿಂಗ್​ ಅಗತ್ಯ

ಮಂಗಳೂರಿನಿಂದ ಮುಂಬೈವರೆಗಿನ ಕೊಂಕಣ ರೈಲ್ವೆಯ ಮಾರ್ಗದಲ್ಲಿ 734 ಕಿ.ಮೀ. ಹಳಿಗಳನ್ನು ದ್ವಿಪಥಗೊಳಿಸಬೇಕಿದೆ. ಈ ಮಾರ್ಗದಲ್ಲಿ ಒಂದೇ ಹಳಿ ಇರುವುದರಿಂದ ರೈಲ್ವೆ ಕ್ರಾಸಿಂಗ್​ ಸಹ ಹೆಚ್ಚಾಗುತ್ತಿದ್ದು ಸಕಾಲಕ್ಕೆ ಪ್ರಯಾಣ ಮುಗಿಸಲು ಜನರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ಹಳಿಗಳನ್ನು ಡಬ್ಲಿಂಗ್​ ಮಾಡುವ ಮೂಲಕ ಹೆಚ್ಚುವರಿ ರೈಲ್ವೆ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಕೂಡಲೇ ಸರ್ವೇ ನಡೆಸಿ, ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು ಸಂಸದ ಕೋಟ ಮನವಿ ಮಾಡಿದರು.
"

ಹಲವು ವರ್ಷದಿಂದ ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿ ಜಿಲ್ಲೆಗಳ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆಯ ಕೊರತೆ ಇದೆ. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ತುರ್ತು ಕ್ರಮಗಳಿಂದಾಗಿ ಸಾಕಷ್ಟು ಪ್ರಗತಿ ಕಂಡು ಬರುತ್ತಿದೆ. ಆದರೆ, ನಮ್ಮ ಕರಾವಳಿ ಭಾಗಕ್ಕೆ ಇನ್ನೂ ಹೊಸ ರೈಲುಗಳ ಅಗತ್ಯತೆಯಿದೆ ಎಂದು ಸಚಿವರ ಗಮನಕ್ಕೆ ತಂದಿದ್ದೇನೆ. ಅಲ್ಲದೆ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ನೆರವು ನೀಡುವಂತೆಯೂ ಮನವಿ ಮಾಡಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net