ದಕ್ಷ್​ ಮನೆಗೆ ಶಾಸಕ ಯಶ್​ಪಾಲ್​ ಭೇಟಿ

ಬ್ರಹ್ಮಾವರದಲ್ಲಿ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟ ದಕ್ಷ್​ ಪೂಜಾರಿ ಕುಟುಂಬಕ್ಕೆ ಯಶ್​ಪಾಲ್​ ಸುವರ್ಣ ಸಾಂತ್ವನ ಹೇಳಿದರು. ಬಿ.ಎನ್​. ಶಂಕರ್​ ಪೂಜಾರಿ, ಮಹೇಶ್​ ಕೋಟ್ಯಾನ್​, ಪ್ರಥ್ವಿರಾಜ್​ ಶೆಟ್ಟಿ ಬಿಲ್ಲಾಡಿ, ಸುಶಾಂತ್​ ಪೂಜಾರಿ, ರಾಜು ಪೂಜಾರಿ ಉಪ್ಪೂರು, ನಿತ್ಯಾನಂದ ಪೂಜಾರಿ ಚಾಂತಾರು,  ಗೌತಮ್​ ಅಗ್ರಹಾರ, ಮಹೇಂದ್ರ ನೀಲಾವರ, ಮಿಥುನ್​ ಅಮೀನ್​, ಗಿರಿಧರ್​ ಚಾಂತಾರು, ಸಂತೋಷ್​ ಜತ್ತನ್​ ಇತರರಿದ್ದರು.

Published on

* ತೆಂಗಿನಕಾಯಿ ಬಿದ್ದು ಮೃತಪಟ್ಟ ಮಗುವಿನ ಕುಟುಂಬಕ್ಕೆ ಸಾಂತ್ವನ

ಉಡುಪಿ: ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಹೆರಂಜೆಯಲ್ಲಿ ಒಂದೂವರೆ ವರ್ಷದ ದಕ್ಷ್​ ಪೂಜಾರಿ ಎಂಬ ಬಾಲಕನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟಿದ್ದು, ಅವರ ಮನೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಶಾಸಕ ಯಶ್​ಪಾಲ್​ ಸುವರ್ಣ ಶುಕ್ರವಾರ (ಜೂ.12) ಭೇಟಿ ನೀಡಿ ಸಾಂತ್ವನ ಹೇಳಿದರು.
ಮಗುವಿನ ತಂದೆಯ ಬಳಿ ಘಟನೆಯ ಬಗ್ಗೆ ಮಾಹಿತಿ ಪಡೆದ ಯಶ್​ಪಾಲ್​, ತಕ್ಷಣವೇ ಸರ್ಕಾರಕ್ಕೆ ಈ ದುರ್ಟನೆಯನ್ನು ವರದಿ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಸರ್ಕಾರದಿಂದ ಗರಿಷ್ಠ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಮೃತ ಮಗುವಿನ ತಂದೆ ಪ್ರಶಾಂತ್​ ಪೂಜಾರಿ, ತಾಯಿ ಸುಚಿತ್ರಾ ಹಾಗೂ ಕುಟುಂಬಸ್ಥರಿಗೆ ಸಂತೈಸಿ, ವೈಯುಕ್ತಿಕವಾಗಿ ಪರಿಹಾರ ಧನ ನೀಡಿದರು.

ರಸ್ತೆಗೆ ಅನುದಾನ ಭರವಸೆ

ಘಟನೆ ನಡೆದ ಸ್ಥಳಕ್ಕೆ ಸೂಕ್ತ ರಸ್ತೆ ಸಂಪರ್ಕ ಮಾಡಿಕೊಡುವಂತೆ ಈ ವೇಳೆ ಸ್ಥಳೀಯರು ಶಾಸಕ ಯಶ್​ಪಾಲ್​ಗೆ ಮನವಿ ಸಲ್ಲಿಸಿದರು. ರಸ್ತೆ ಸಂಪರ್ಕ ಕಲ್ಪಿಸಲು ಅಲ್ಲಿನ ಜಾಗದ ಮಾಲೀಕರು ಅವಕಾಶ ನೀಡಿದರೆ ರಸ್ತೆ ಕಾಮಗಾರಿಗೆ ಆದ್ಯತೆಯ ಮೇರೆಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎನ್​. ಶಂಕರ್​ ಪೂಜಾರಿ, ಪಕ್ಷದ ಪ್ರಮುಖರಾದ ಮಹೇಶ್​ ಕೋಟ್ಯಾನ್​, ಪ್ರಥ್ವಿರಾಜ್​ ಶೆಟ್ಟಿ ಬಿಲ್ಲಾಡಿ, ಸುಶಾಂತ್​ ಪೂಜಾರಿ, ರಾಜು ಪೂಜಾರಿ ಉಪ್ಪೂರು, ನಿತ್ಯಾನಂದ ಪೂಜಾರಿ ಚಾಂತಾರು, ಗೌತಮ್​ ಅಗ್ರಹಾರ, ಮಹೇಂದ್ರ ನೀಲಾವರ, ಮಿಥುನ್​ ಅಮೀನ್​, ಗಿರಿಧರ್​ ಚಾಂತಾರು, ಸಂತೋಷ್​ ಜತ್ತನ್​, ಉದಯ್​ ಕಾಮತ್​, ದಿನೇಶ್​ ಚಾಂತರು, ಪ್ರೇಮಾ ಶೆಟ್ಟಿ, ಅಶೋಕ್​ ಹೇರೂರು, ಹೇಮಾ ಅಶೋಕ್​, ರಮ್ಯಾ ಉಪ್ಪೂರು, ಅಶೋಕ್​ ಅಮೀನ್​, ಶೋಭಾ ಪೂಜಾರಿ ಹಂದಾಡಿ, ಬೇಬಿ ಚಾಂತಾರು, ರೇವತಿ, ಶೈಲಜಾ ಹೇರೂರು, ಕಂದಾಯ ಇಲಾಖೆಯ ಅಧಿಕಾರಿ ರಾಜು, ಪಿಡಿಒ ಮೀರಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net