ಪುಟಾಣಿಗಳ ಶಿಕ್ಷಣಕ್ಕೆ ಅಂಗನವಾಡಿ ಅಡಿಪಾಯ

ಅಂಗನವಾಡಿ ಕೇಂದ್ರ ಕಾಮಗಾರಿಗೆ ಯಶ್​ಪಾಲ್​ ಸುವರ್ಣ ಶಿಲಾನ್ಯಾಸ ನೆರವೇರಿಸಿದರು. ದಿನಕರ್​ ಹೇರೂರು, ರಮೇಶ್​ ಕಾಂಚನ್​, ಅಶೋಕ್​ ನಾಯ್ಕ್​, ಕಲ್ಪನಾ ಸುಧಾಮ, ಹರೀಶ್​ ರಾಮ್​, ಸವಿತಾ ಹರೀಶ್​ ರಾಮ್​, ದಿನೇಶ್​ ಅಮೀನ್​, ಜಗದೀಶ್​ ಆಚಾರ್ಯ ಇತರರಿದ್ದರು.
ಅಂಗನವಾಡಿ ಕೇಂದ್ರ ಕಾಮಗಾರಿಗೆ ಯಶ್​ಪಾಲ್​ ಸುವರ್ಣ ಶಿಲಾನ್ಯಾಸ ನೆರವೇರಿಸಿದರು. ದಿನಕರ್​ ಹೇರೂರು, ರಮೇಶ್​ ಕಾಂಚನ್​, ಅಶೋಕ್​ ನಾಯ್ಕ್​, ಕಲ್ಪನಾ ಸುಧಾಮ, ಹರೀಶ್​ ರಾಮ್​, ಸವಿತಾ ಹರೀಶ್​ ರಾಮ್​, ದಿನೇಶ್​ ಅಮೀನ್​, ಜಗದೀಶ್​ ಆಚಾರ್ಯ ಇತರರಿದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಭಿಮತ

* ಎರಡು ಕಡೆಗಳಲ್ಲಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ

* ಸರ್ಕಾರದಿಂದ ತಲಾ 20 ಲಕ್ಷ ರೂ. ಅನುದಾನ

ಉಡುಪಿ: ಪುಟಾಣಿ ಮಕ್ಕಳಿಗೆ ಶಿಕ್ಷಣದೊಂದಿಗೆ ಪೌಷ್ಟಿಕ ಆಹಾರ ಕಲ್ಪಿಸುವ ಮೂಲಕ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ವಿಶೇಷ ಕೊಡುಗೆ ನೀಡುತ್ತಿದೆ. ವಿದ್ಯಾರ್ಥಿ ಜೀವನದ ಶೈಕ್ಷಣಿಕ ಆರಂಭಕ್ಕೆ ಅಂಗನವಾಡಿಯೇ ಅಡಿಪಾಯವಾಗಿದೆ. ಆದಿ ಉಡುಪಿ ಹಾಗೂ ಮಂಚಿ ಕುಮೇರಿಯಲ್ಲಿ ಅಂಗನವಾಡಿ ಕೇಂದ್ರ ಬೇಕೆಂಬ ಹಲವು ವರ್ಷದ ಬೇಡಿಕೆ ಈಡೇರಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.
ಉಡುಪಿ ನಗರಸಭಾ ವ್ಯಾಪ್ತಿಯ ಇಂದ್ರಾಳಿ ವಾರ್ಡ್​ನ ಮಂಚಿ ಕುಮೇರಿ ಹಾಗೂ ಬನ್ನಂಜೆ ವಾರ್ಡ್​ನ ಆದಿಉಡುಪಿ ಮೀನು ಮಾರುಕಟ್ಟೆಯ ಬಳಿ ತಲಾ 20 ಲಕ್ಷ ರೂ. ವೆಚ್ಚದಲ್ಲಿ ಎರಡು ಅಂಗನವಾಡಿ ಕೇಂದ್ರದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
 ಅಂಗನವಾಡಿ ಕೇಂದ್ರದ ಕಾಮಗಾರಿಗೆ ಉಡುಪಿ ಶಾಸಕ ಯಶ್​ಪಾಲ್​ ಭೂಮಿಪೂಜೆ ನೆರವೇರಿಸಿದರು.

ಅನುದಾನ ಬಿಡುಗಡೆಗೊಳ್ಳುವಲ್ಲಿ ಮುತುವರ್ಜಿ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅನುದಾನ ಬಿಡುಗಡೆ ಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೆ ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಕೃತಜ್ಞತೆ ಸಲ್ಲಿಸಿದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು, ನಗರಸಭಾ ಮಾಜಿ ಸದಸ್ಯರಾದ ಅಶೋಕ್​ ನಾಯ್ಕ್​, ಕಲ್ಪನಾ ಸುಧಾಮ, ಹರೀಶ್​ ರಾಮ್​, ಸವಿತಾ ಹರೀಶ್​ ರಾಮ್​, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ಪ್ರಧಾನ ಕಾರ್ಯದರ್ಶಿ ಜಗದೀಶ್​ ಆಚಾರ್ಯ, ಸ್ಥಳೀಯ ಮುಖಂಡರು, ಇಲಾಖಾ ಅಧಿಕಾರಿಗಳು, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net