ಪ್ರಾಣದೇವನ ಅನುಗ್ರಹದಿಂದ ಸಕಲ ಕಾರ್ಯ ಸಿದ್ಧಿ

ಉಡುಪಿಯ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರ ಪುನ; ಪ್ರತಿಷ್ಠಾಪನೆ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಜಯಕರ್​ ಶೆಟ್ಟಿ ಇಂದ್ರಾಳಿ, ಭೂಪತಿ ಶೆಟ್ಟಿ, ಕಿಶೋರ್​ ಆಳ್ವ, ಬಿ.ಕುಶಲ್​ ಶೆಟ್ಟಿ, ಜಯಕರ್​ ಶೆಟ್ಟಿ ಬುಡ್ನಾರು, ಸೀತಾರಾಮ ನಾಯಕ್​ ಮಂಚಿಕೋಡಿ, ಸಾಧು ಶೆಟ್ಟಿ, ರತ್ನಾಕರ್​ ಶೆಟ್ಟಿ ಇತರರಿದ್ದರು.
ಉಡುಪಿಯ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರ ಪುನ; ಪ್ರತಿಷ್ಠಾಪನೆ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಜಯಕರ್​ ಶೆಟ್ಟಿ ಇಂದ್ರಾಳಿ, ಭೂಪತಿ ಶೆಟ್ಟಿ, ಕಿಶೋರ್​ ಆಳ್ವ, ಬಿ.ಕುಶಲ್​ ಶೆಟ್ಟಿ, ಜಯಕರ್​ ಶೆಟ್ಟಿ ಬುಡ್ನಾರು, ಸೀತಾರಾಮ ನಾಯಕ್​ ಮಂಚಿಕೋಡಿ, ಸಾಧು ಶೆಟ್ಟಿ, ರತ್ನಾಕರ್​ ಶೆಟ್ಟಿ ಇತರರಿದ್ದರು.
Published on

* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

* ಶ್ರೀಮುಖ್ಯಪ್ರಾಣ ದೇವರ ಪುನ; ಪ್ರತಿಷ್ಠೆಯ ಧಾರ್ಮಿಕ ಸಭೆ

ಉಡುಪಿ: ಇಂದ್ರಾಳಿ ದೇವಸ್ಥಾನದ ಪರಿಸರವು ಉಳಿದೆಲ್ಲ ದೇಗುಲಗಳಿಗೆ ಮಾದರಿಯಾಗಿದೆ. ಇಲ್ಲಿಗೆ ಬಂದರೆ ಭಕ್ತರ ಮನಸ್ಸು ಶಾಂತಗೊಳ್ಳುತ್ತದೆ. ಹನುಮನ ಅವತಾರ ಕಂಡ ನಾಡು ನಮ್ಮದು. ಮಧ್ವಾಚಾರ್ಯರೂ ಸಹ ಹನುಮನ ಅವತಾರವೇ ಆಗಿದ್ದರು. ಅಂತಹ ಪ್ರಾಣದೇವನ ಅನುಗ್ರಹದಿಂದ ಸಕಲ ಕಾರ್ಯಗಳೂ ಸಿದ್ಧಿಯಾಗುತ್ತದೆ. ಆತನ ಅನುಗ್ರದಿಂದ ವಿಜಯ ಶತಸಿದ್ಧ. ಎಲ್ಲಿ ಹನುಮನಿದ್ದಾನೋ ಅಲ್ಲಿಗೆ ರಾಮನೂ ಬರುತ್ತಾನೆ. ಇಲ್ಲಿ ಪುನ; ಪ್ರತಿಷ್ಠಾಪನೆಗೊಂಡ ಮುಖ್ಯಪ್ರಾಣನ ಅನುಗ್ರಹ ಸಕಲ ಭಕ್ತರಿಗೂ ಲಭಿಸಲಿ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು. 
ಉಡುಪಿಯ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರ ಪುನ; ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಹಾಗೂ ಬ್ರಮ ಕಲಶೋತ್ಸವದ ನಿಮಿತ್ತ ಭಾನುವಾರ (ಏ.5) ಸಂಜೆ ಆಯೋಜಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅದಾನಿ ಸಮೂಹ ಸಂಸ್ಥೆಗಳ (ದಕ್ಷಿಣ ಭಾರತ) ಅಧ್ಯಕ್ಷ ಕಿಶೋರ್​ ಆಳ್ವ, ಉಜ್ವಲ ಸಮೂಹ ಸಂಸ್ಥೆಗಳ ಮಾಲೀಕ ಅಜಯ್​ ಪಿ. ಶೆಟ್ಟಿ ಮಾತನಾಡಿದರು. ಅನಂತೇಶ್ವರ ದೇವಳದ ಪ್ರಧಾನ ಅರ್ಚಕ, ವಿದ್ವಾಂಸ ಸಗ್ರಿ ವೇದವ್ಯಾಸ ಐತಾಳ್​ ಧಾರ್ಮಿಕ ಉಪನ್ಯಾಸ ನೀಡಿದರು. ಇಂದ್ರಾಳಿ ಶ್ರೀಮುಖ್ಯಪ್ರಾಣ ದೇವರು ಹಾಗೂ ನಾಗ ದೇವರ ಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಭೂಪತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಂಬಯಿ ವಿ.ಕೆ. ಗ್ರೂಪ್​ ಆಫ್​ ಕಂಪನೀಸ್​ನ ಆಡಳಿತ ನಿರ್ದೇಶಕ ಕೆ.ಎಂ. ಶೆಟ್ಟಿ, ಮುಂಬಯಿ ಡೊಂಬಿವಿಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ್​ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಬುಡ್ನಾರು ಬ್ರಹ್ಮಬೈದರ್ಕಳ ಗರೊಡಿಯ ಆನುವಂಶಿಕ ಮೊಕ್ತೇಸರ ಶೇಖರ್​ ಶೆಟ್ಟಿ, ಇಂದ್ರಾಣಿ ಮುಖ್ಯಪ್ರಾಣ, ನಾಗದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ್​ ಶೆಟ್ಟಿ ಬುಡ್ನಾರು, ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್​ ಮಂಚಿಕೋಡಿ, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಸಾಧು ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ರತ್ನಾಕರ್​ ಶೆಟ್ಟಿ ಬುಡ್ನಾರು, ಪಂಚದುರ್ಗಾ ದೇವಿ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಜಯ್​ ಜೆ. ಮಂಚಿ, ನಾಗೇಶ್​ ಹೆಗ್ಡೆ, ದೇಗುಲದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು.
ಪ್ರಣಮ್ಯಾ ನಾಯಕ್​ ಪ್ರಾರ್ಥಿಸಿದರು. ಇಂದ್ರಾಳಿ ಪಂಚದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಕುಶಲ್​ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಾಕರ್​ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಸತ್ಕಾರ ಸಮಿತಿಯ ಸಂಚಾಲಕ ಶಿವಪ್ರಸಾದ್​ ಶೆಟ್ಟಿ ವಂದಿಸಿದರು.
"

ದೇಶದ ಅಸ್ಮಿತೆಯೇ ಅಧ್ಯಾತ್ಮವಾಗಿದೆ. ಹೀಗಾಗಿ ದೇವ&ದೈವಸ್ಥಾನಗಳು ನಮಗೆಲ್ಲ ಬೇಕಾಗಿದೆ. ಎಲ್ಲವುದಕ್ಕೂ ಸಹ ದೇವರ ನಿರ್ಣಯವಿರುತ್ತದೆ. ಅದುವೇ ಇಂದ್ರಾಣಿಯ ಮುಖ್ಯಪ್ರಾಣ ದೇವರ ಪುನ; ಪ್ರತಿಷ್ಠಾಪನಾ ಕಾರ್ಯವಾಗಿದೆ. ಆಂಜನೇಯನು ಶಕ್ತಿ ಹಾಗೂ ಸಾಹಸದ ಪ್ರತೀಕನಾಗಿದ್ದಾನೆ. ಬದುಕಿನ ಯಶಸ್ಸಿನ ಕೀರ್ತಿಯ ಧ್ವಜ ಕೆಳಗಿಳಯದಂತೆ ವಾಯುದೇವ ಕರುಣಿಸಲಿ. ಜಗಕ್ಕೆ ಒಳಿತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net