ಉಡುಪಿಯ ಚೆಲುವೆ ಮಿಸ್​ ಯೂನಿವರ್ಸ್​ ಇಂಡಿಯಾ ಫೈನಲಿಸ್ಟ್​

ಸ್ಫೂರ್ತಿ ಶೆಟ್ಟಿ
ಸ್ಫೂರ್ತಿ ಶೆಟ್ಟಿ
Published on
ಉಡುಪಿ: ಮಣಿಪಾಲ್​ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ನಲ್ಲಿ ಮಾರ್ಕೆಟಿಂಗ್​ ವಿಭಾಗದ ಉದ್ಯೋಗಿ ಸ್ಫೂರ್ತಿ ಶೆಟ್ಟಿ ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಪ್ರತಿಷ್ಠಿತ ಮಿಸ್​ ಯೂನಿವರ್ಸ್​ ಇಂಡಿಯಾ 2026 ಸ್ಪರ್ಧೆಯ ಫೈನಲಿಸ್ಟ್​ ಆಗಿ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಫೂರ್ತಿ ಶೆಟ್ಟಿ, ಜುಲೈ 18 ರಿಂದ ಆಗಸ್ಟ್​ 23 ರವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಮೂಲೆಗಳಿಂದ ಬಂದ ಒಟ್ಟು 50 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಜೈಪುರ, ಬೆಂಗಳೂರು, ಇಂದೂರು ನಗರಗಳಲ್ಲಿ ವಿವಿಧ ಸುತ್ತಿನ ಸ್ಪರ್ಧೆಗಳು ಹಾಗೂ ದೆಹಲಿಯಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

14ನೇ ವಯಸ್ಸಿನಲ್ಲೇ ಸೌಂದರ್ಯ ಸ್ಪರ್ಧಾ ಲೋಕಕ್ಕೆ ಕಾಲಿಟ್ಟಿದ್ದು, 2018 ರಿಂದಲೇ ಹಲವು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. 2020 ರಲ್ಲಿ ಕ್ವೀನ್​ ಆಫ್​ ಕರ್ನಾಟಕ ಕಿರೀಟ ಪಡೆದಿದ್ದು, 2021ರಲ್ಲಿ ಮಿಸ್​ ಇಂಟರ್​ ನ್ಯಾಶನಲ್​ ಯುನಿವರ್ಸ್​ ನಲ್ಲಿ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದೆ. 2024ರಲ್ಲಿ ಮಿಸ್​ ಗ್ರ್ಯಾಂಡ್​ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್​ 11ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, 2025ರಲ್ಲಿ ಮಿಸ್​ ಯುನಿವರ್ಸ್​ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್​ 10ರಲ್ಲಿ ಸ್ಥಾನ ಪಡೆದಿದ್ದೇನೆ. ಗ್ರೂಮಿಂಗ್​ ಸೆಷನ್​, ವ್ಯಕ್ತಿತ್ವ ವಿಕಸನ, ಫ್ಯಾಶನ್​ ಸ್ಪರ್ಧೆ, ಸಾಮಾಜಿಕ ಜವಾಬ್ದಾರಿ, ಸಂದರ್ಶನ ಹೀಗೆ ಹಲವು ಸುತ್ತುಗಳಲ್ಲಿ ಮೌಲ್ಯಮಾಪನ ನಡೆದು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದೇನೆ ಎಂದರು. ಸಹೋದರ ಮಂಜಿತ್​ ಶೆಟ್ಟಿ, ಮಾಜಿ ಲಯನ್ಸ್​ ಕೋ-ಆರ್ಡಿನೇಟರ್​ ಮಲ್ಲಿಕಾ ಅಶೋಕ್​ ಶೆಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net