ಉಡುಪಿ ಜಿಲ್ಲಾ ಕಜಾಪ ಮಹಿಳಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹೇಶ್ ಠಾಕೂರ್ ಅವರಿಗೆ 'ಜಾನಪದ ಪ್ರಚಂಡ' ಪ್ರಶಸ್ತಿ ನೀಡಲಾಯಿತು. ಡಾ. ಜಾನಪದ ಎಸ್. ಬಾಲಾಜಿ, ಡಾ. ಭಾರತಿ ಮರವಂತೆ, ಪೂರ್ಣಿಮಾ, ಉಷಾ ಹೆಬ್ಬಾರ್, ಡಾ. ಗಣನಾಥ್ ಶೆಟ್ಟಿ ಎಕ್ಕಾರು, ನಾಗರಾಜ್ ಆಚಾರ್ಯ, ರಾಘವೇಂದ್ರ ಪ್ರಭು ಕರ್ವಾಲು ಇದ್ದರು.
Published on:
Copied
Follow Us
* ಅಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಅಭಿಮತ
* ಉಡುಪಿ ಜಿಲ್ಲಾ ಕಜಾಪ ಮಹಿಳಾ ಘಟಕ ಉದ್ಘಾಟನೆ
ಉಡುಪಿ: ನಾಡಿನ ಸಂಸ್ಕೃತಿ, ಸಂಪ್ರದಾಯದ ಮಹತ್ವ ಅನುಸರಿಸಿ ಆಚರಿಸುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮುಖ್ಯವಾಗಿದೆ. ಜಾನಪದವೂ ಸಹ ಮಹಿಳಾ ಪ್ರಧಾನವಾಗಿದ್ದು, ಜಾನಪದ ಇಂದಿಗೂ ಜೀವಂತಿಕೆ ಇದ್ದರೆ ಅದಕ್ಕೂ ಸಹ ಮಹಿಳೆಯರೇ ಕಾರಣರಾಗಿದ್ದಾರೆ. ಕನ್ನಡ ಜಾನಪದ ಪರಿಷತ್ನ ದಶಮಾನೋತ್ಸವದ ನಿಮಿತ್ತ ರಾಜ್ಯಾದ್ಯಂತ ಮಹಿಳಾ ಘಟಕ ಸ್ಥಾಪಿಸಿ ಮಹಿಳಾ ಜಾನಪದ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಅಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಭರವಸೆ ನೀಡಿದರು.
ಮಣಿಪಾಲದ ಸರಳೆಬೆಟ್ಟುವಿನ ರತ್ನ ಸಂಜೀವ ಕಲಾಭವನದಲ್ಲಿ ಶನಿವಾರ (ಫೆ.28) ಆಯೋಜಿಸಿದ್ದ ಪರಿಷತ್ನ ಉಡುಪಿ ಜಿಲ್ಲಾ ಮಹಿಳಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಪ್ರಶಸ್ತಿ ಪ್ರದಾನ
ಜಾನಪದ ಹಾಗೂ ಸಾಂಸತಿಕ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುವ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ನ ಉಪಾಧ್ಯಕ್ಷ ಮಹೇಶ್ ಠಾಕೂರ್ ಅವರಿಗೆ ಉಡುಪಿ ಜಿಲ್ಲಾ ಮಹಿಳಾ ಘಟಕದ ವತಿಯಿಂದ 'ಜಾನಪದ ಪ್ರಚಂಡ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ, ನಗರಸಭಾ ಮಾಜಿ ಸದಸ್ಯ ನರಸಿಂಹ ನಾಯಕ್, ರಮಾನಂದ್ ಸಾಮಂತ, ಕೌಶಿಕ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷರಾಗಿ ಉಷಾ ಹೆಬ್ಬಾರ್
ಉಡುಪಿ ಜಿಲ್ಲಾ ಕಜಾಪ ಮಹಿಳಾ ಟಕದ ಪ್ರಥಮ ಜಿಲ್ಲಾಧ್ಯೆಯಾಗಿ ಆಯ್ಕೆಯಾಗಿದ್ದ ಹಿರಿಯ ಸಂಗೀತ ಕಲಾವಿದೆ ವಿದುಷಿ ಉಷಾ ಹೆಬ್ಬಾರ್, ಕಾರ್ಯದರ್ಶಿ ಪ್ರಭಾ ಹಾಗೂ ಇನ್ನಿತರ 11 ಸದಸ್ಯರಿಗೆ ಕಜಾಪ ವಿಭಾಗೀಯ ಸಂಚಾಲಕಿ ಡಾ. ಭಾರತಿ ಮರವಂತೆ ಪದಪತ್ರ ವಿತರಿಸಿದರು. ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸಮ್ಮೇಳನವನ್ನು ಉಷಾ ಹೆಬ್ಬಾರ್ ನೇತೃತ್ವದಲ್ಲಿ ಮೇ ತಿಂಗಳಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದರು. ಜಾನಪದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಪರಿಷತ್ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
"
ಉಡುಪಿ ಜಿಲ್ಲೆಯಲ್ಲಿ ಕನ್ನಡ ಜಾನಪದ ಪರಿಷತ್ನ ಮಹಿಳಾ ಘಟಕ ರಚಿಸಿರುವುದು ಸಂತಸ ವಿಚಾರ. ಘಟಕದ ಮೂಲಕ ಮಹಿಳೆಯರಲ್ಲಿ ಜಾನಪದ ಜಾಗೃತಿ ಮೂಡಿಸುತ್ತಿರುವುದು ಅನುಕರಣೀಯ. ಉಷಾ ಹೆಬ್ಬಾರ್ ನೇತೃತ್ವದಲ್ಲಿ ಜಾನಪದ ಕಲೆಯ ಉನ್ನತಿಯಾಗಲಿ.