ನಿಷ್ಠೆಯಿಂದ ವೃತ್ತಿ ನಿಭಾಯಿಸುವ ವರ್ತಕರು

ಉಡುಪಿಯ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ಜಿಲ್ಲಾ ವರ್ತಕರ ಸಂಘದ ಸಮಾವೇಶವನ್ನು ಡಾ. ನೀ.ಬಿ. ವಿಜಯ ಬಲ್ಲಾಳ್​ ಉದ್ಘಾಟಿಸಿದರು. ಡಾ. ಎಂ. ಉದಯಕುಮಾರ್​ ಸರಳತ್ತಾಯ, ಐರೋಡಿ ಸಹನಶೀಲ ಪೈ, ಅರುಣಕಲಾ ಎಸ್​. ರಾವ್​, ಪ್ರಭಾಕರ್​ ಪೂಜಾರಿ, ಬಾಲಕೃಷ್ಣ ಶೆಟ್ಟಿ. ಮಾಯಾ ಕಾಮತ್​,  ಸುರೇಶ್​ ಪೈ, ಕರುಣಾ ಪೈ, ಮಡಿ ವಿಶ್ವನಾಥ್​ ಖಾರ್ವಿ ಇತರರಿದ್ದರು.

Published on

* ಡಾ. ನೀ.ಬಿ. ವಿಜಯ ಬಲ್ಲಾಳ್​ ಅಭಿಪ್ರಾಯ

* ಜಿಲ್ಲಾ ಸಂಘದ ಸಮಾವೇಶ ಉದ್ಘಾಟನೆ

ಉಡುಪಿ: ವರ್ತಕರು ಬಹಳ ಶ್ರಮಜೀವಿಗಳು. ತಮ್ಮ ವ್ಯಾಪಾರ, ವಹಿವಾಟಿನೊಂದಿಗೆ ಸಮಾಜ ಸೇವೆಯನ್ನೂ ಮಾಡುವುದು ಅವರ ಧರ್ಮ ವೃತ್ತಿಯಾಗಿದೆ. ವರ್ತಕರಲ್ಲಿ ಹೆಚ್ಚಿನವರು ಬಹಳ ನಿಷ್ಠೆಯಿಂದ ತಮ್ಮ ವೃತ್ತಿ ನಿಭಾಯಿಸುತ್ತಾರೆ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನೀ.ಬಿ. ವಿಜಯ ಬಲ್ಲಾಳ್​ ಅಭಿಪ್ರಾಯಪಟ್ಟರು. 
ಉಡುಪಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸಿದ್ದ ಉಡುಪಿ ಜಿಲ್ಲಾ ವರ್ತಕರ ಸಂಘದ 2026ನೇ ಸಾಲಿನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪರ್ಯಾಯ ಶೀರೂರು ಮಠದ ದಿವಾನ ಡಾ. ಎಂ. ಉದಯಕುಮಾರ್​ ಸರಳತ್ತಾಯ ಮಾತನಾಡಿ ಶುಭಹಾರೈಸಿದರು.
ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಅವರು ಅಶಕ್ತರಿಗೆ ಸಹಾಯಧನ ಹಾಗೂ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿದರು. ಅಂತಾರಾಷ್ಟ್ರೀಯ ಖ್ಯಾತ ಕ್ರೀಡಾಪಟು ಅರುಣಕಲಾ ಎಸ್​. ರಾವ್​ ಅವರನ್ನು ಸನ್ಮಾನಿಸಲಾಯಿತು. 
ನಗರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಸದಸ್ಯ ಬಾಲಕೃಷ್ಣ ಶೆಟ್ಟಿ. ಜಾನಪದ ಖ್ಯಾತ ಕಲಾವಿದೆ ಮಾಯಾ ಕಾಮತ್​,  ಸುರೇಶ್​ ಪೈ, ಕರುಣಾ ಪೈ, ರಮ್ಯಾ ಮಲ್ಯ, ಭವಾನಿ ಪೈ, ಸೂರಜ್​ ಪೈ, ಡಾಕಪ್ಪ, ವೆಂಕಟೇಶ್​, ಸಂಘದ ಕಾರ್ಯದರ್ಶಿ ಪಾದೆಮಠ ನಾಗರಾಜ್​ ಅಡಿಗ, ಪದಾಧಿಕಾರಿಗಳಾದ ಸತೀಶ್​ ಕಿಣಿ, ಗೌರಿಶ್ರೀ, ಅನೂಷಾ ದೇವಾಡಿಗ, ಐಶ್ವರ್ಯಾ ಹಾಗೂ ಹಲವಾರು ವರ್ತಕರು ಉಪಸ್ಥಿತರಿದ್ದರು.
ಸಂಘದ ಸಂಪರ್ಕಾಧಿಕಾರಿ ಮಡಿ ವಿಶ್ವನಾಥ್​ ಖಾರ್ವಿ ಕಾರ್ಯಕ್ರಮಿ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net