ಉಡುಪಿ ಜಿಲ್ಲಾ ಶಿಕ್ಷಕರ ಸಂಘದ ಚುನಾವಣಾ ಪ್ರಕ್ರಿಯೆ ಸ್ಥಗಿತ

ಉಡುಪಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ದಿನಕರ್​ ಶೆಟ್ಟಿ ಅಂಪಾರು.
ಉಡುಪಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ದಿನಕರ್​ ಶೆಟ್ಟಿ ಅಂಪಾರು.
Published on

* ಅಧ್ಯಕ್ಷ ಕೆ.ದಿನಕರ್​ ಶೆಟ್ಟಿ ಅಂಪಾರು ಮಾಹಿತಿ

*  ಕೇಂದ್ರ ಸಮಿತಿಯ ನಡೆಗೆ ಶಿಕ್ಷಕರ ಖಂಡನೆ

ಉಡುಪಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-2031ನೇ ಸಾಲಿನ ಚುನಾವಣೆಗೆ ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ತಾಂತ್ರಿಕ ಕಾರಣದಿಂದಾಗಿ ಉಡುಪಿ ಜಿಲ್ಲಾ ಸಂಘದ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಜಿಲ್ಲಾಧ್ಯಕ್ಷ ಕೆ.ದಿನಕರ್​ ಶೆಟ್ಟಿ ಅಂಪಾರು ತಿಳಿಸಿದ್ದಾರೆ. 
ಉಡುಪಿ ಜಿಲ್ಲೆಯಲ್ಲಿ ಏ.11ರಿಂದ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಆದರೆ, ಶಿಕ್ಷಕರ ಸಂಘದ ಕೇಂದ್ರ ಸಮಿತಿಯು ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ರಾಜ್ಯ ಮಟ್ಟದ ಧನ್ಯತಾ ಸಮಾವೇಶಕ್ಕೆ ಜಿಲ್ಲೆಯ ಶಿಕ್ಷಕರಿಂದ ಹಣ ವಸೂಲಿ ಮಾಡಿತ್ತು. ಅದನ್ನು ರಾಜ್ಯಸಂಘಕ್ಕೆ ನೀಡದ್ದರಿಂದ ಉಡುಪಿ ಜಿಲ್ಲೆಯ ಮತದಾರರ ಪಟ್ಟಿಗೆ ಅನುಮೋದನೆ ನೀಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳನ್ನೂ ನೇಮಿಸಿಲ್ಲ

4 ವರ್ಷದಿಂದ ಉಡುಪಿ ಜಿಲ್ಲೆಯ ಮತ್ತು ತಾಲೂಕು ಶಾಖೆಗಳಿಗೆ ಶಿಕ್ಷಕರ ಸದಸ್ಯತ್ವ ಶುಲ್ಕದ ಮೊತ್ತದ ಪಾಲು ಪಾವತಿ ಮಾಡಿಲ್ಲ. ನಾನು ಮತ್ತೆ ಕೇಂದ್ರ ಸಮಿತಿಯ ಚುನಾವಣೆಯಲ್ಲಿ ಭಾಗವಹಿಸಬಾರದು ಎಂಬ ಕಾರಣಕ್ಕಾಗಿ ಜಿಲ್ಲೆಯ ಎಲ್ಲ ತಾಲೂಕುಗಳ ಮತದಾರ ಪಟ್ಟಿ ಮತ್ತು ಚುನಾವಣಾ ಅಧಿಕಾರಿಗಳ ನೇಮಕ ಪ್ರಕ್ರಿಯೆಗೂ ಅನುಮೋದನೆ ನೀಡಿಲ್ಲ. ಜಿಲ್ಲೆಯ ಇನ್ನಿತರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜಿಲ್ಲೆಯ ಸಮಸ್ತ ನೌಕರರು, ಶಿಕ್ಷಕರಿಗಿರುವ ಸಮಸ್ಯೆಗಳಿಗೆ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸ್ಪಂದಿಸುತ್ತಿದ್ದೇನೆ. ಹೀಗಾಗಿ ಕೇಂದ್ರ ಸಮಿತಿಯು ಜಿಲ್ಲಾ ಸಂಘದ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಿದೆ ಎಂದು ದಿನಕರ್​ ಶೆಟ್ಟಿ ಆರೋಪಿಸಿದ್ದಾರೆ.  
"

ಕೇಂದ್ರ ಸಮಿತಿಯಿಂದ ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಆಗಿರುವ ಅನ್ಯಾಯ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದೆ. ಈ ಎಲ್ಲ ಪ್ರಕ್ರಿಯೆಗೆ ಕೆಲವು ವ್ಯಕ್ತಿಗಳು ವೈಯಕ್ತಿಕ ಹಿತಾಸಕ್ತಿಯಿಂದ ಉಡುಪಿ ಜಿಲ್ಲೆಯ ಶಿಕ್ಷಕರ ಒಗ್ಗಟ್ಟು ಒಡೆಯಲು ಯತ್ನಿಸುತ್ತಿದ್ದಾರೆ. ಇದು ವಿಷಾದದ ಸಂಗತಿಯಾಗಿದ್ದು, ಈ ಅನ್ಯಾಯವನ್ನು ಉಡುಪಿ ಜಲ್ಲೆಯ ಸಮಸ್ತ ಶಿಕ್ಷಕರು ಖಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net