

ಫಲಿತಾಂಶದಿಂದ ತುಂಬ ಸಂತಸವಾಗಿದೆ. ಪಿಯಸಿಯಲ್ಲಿ ಹೆಚ್ಚಿನ ಅಂಕ ಗಳಿಸಲೇಬೇಕೆಂದು ಚೆನ್ನಾಗಿ ಓದಿಕೊಳ್ಳುತ್ತಿದ್ದೆ. ಅಪ್ಪ-ಅಮ್ಮನ ಪ್ರೋತ್ಸಾಹ, ಕಾಲೇಜಿನಲ್ಲಿ ಅಧ್ಯಯನದ ವೇಳೆ ನನಗೆ ಏನೇ ಸಂದೇಹ ಉಂಟಾದರೂ ಎಲ್ಲ ವಿಷಯ ಶಿಕ್ಷಕರೂ ಅದನ್ನು ನಿವಾರಿಸಿಕೊಡುತ್ತಿದ್ದರು. ಒಟ್ಟು 597 ಮಾರ್ಕ್ಸ್ ಲಭಿಸಿದೆ. ಎಲ್ಲ ವಿಷಯಗಳಿಗೂ ಶೇ.100 ಅಂಕ ಲಭಿಸಿದ್ದು, ಇಂಗ್ಲಿಷ್ನಲ್ಲಿ 3 ಅಂಕ ಕಡಿಮೆ ಬಂದಿದೆ. ಮುಂದೆ ಸಿಎ ಮಾಡುವ ಆಸೆಯಿದೆ.
ನಿರೀಕ್ಷೆಯಂತೆ ಹೆಚ್ಚು ಅಂಕ ಬಂದಿದೆ. ಮೊದಲ ಪಿಯುಸಿಗೆ ಹೋಲಿಸಿದರೆ ದ್ವಿತೀಯ ಪಿಯುಸಿ ಕಳೆದದ್ದೇ ತಿಳಿಯಲಿಲ್ಲ. ತಿಂಗಳ ಕಾಲ ಅಧ್ಯಯನಕ್ಕೆ ರಜಾ ಲಭಿಸಿತ್ತು. ವಿಷವಾರು ಯಾವುದೇ ಡೌಟ್ ಇದ್ದರೂ ಸಹ ಶಿಕ್ಷಕರಿಂದ ವಾಟ್ಸಾಪ್ ಮೂಲಕವೇ ಕ್ಲಿಯರ್ ಮಾಡಿಕೊಳ್ಳುತ್ತಿದ್ದೆ. ನಿತ್ಯ 5-6 ಗಂಟೆ ಓದಿಗೆ ಮೀಸಲಿಟ್ಟಿದ್ದೆ. ಸಂಗೀತವನ್ನೂ ಕಲಿಯುತ್ತಿದ್ದು, ಮೈಂಡ್ ಫ್ರೆಶ್ ಆಗಲು ಮನೆಯಲ್ಲಿ ಭಜನೆ ಮಾಡುತ್ತಿದ್ದೆ. ಮುಂದೆ ಬಿಕಾಂ ಕಲಿತು, ಎಂಬಿಎ ಮಾಡಿ ಉದ್ಯೋಗ ಮಾಡುವ ಕನಸು ಕಂಡಿದ್ದೇನೆ.