ವಿಕಸಿತ್ ಭಾರತ್ ಚಾಲೆಂಜ್ ಟ್ರ್ಯಾಕ್ ಪ್ರಮುಖವಾದುದಾಗಿದೆ. ಭವಿಷ್ಯದ ಆಡಳಿತ, ಹವಾಮಾನ ಬದಲಾವಣೆ, ಜನಸಂಖ್ಯಾ ಲಾಭಾಂಶ, ನಾವೀನ್ಯತೆ ಮತ್ತು ಭವಿಷ್ಯದ ಸಿದ್ಧತೆಯಂತಹ ಕಲ್ಪನೆ ವ್ಯಕ್ತಪಡಿಸಲು ಅವಕಾಶವಿದೆ. 3 ಹಂತದ ಅರ್ಹತಾ ಮೌಲ್ಯಮಾಪನ ಪ್ರಕ್ರಿಯೆಲ್ಲಿ ಸ್ಪರ್ಧಿಗಳು ಮುಂದೆ ಸಾಗುತ್ತಾರೆ. ಪೋರ್ಟಲ್ನಲ್ಲಿ ಬಹುಭಾಷೆಗಳಲ್ಲಿ ನಡೆಸುವ ರಾಷ್ಟ್ರಮಟ್ಟದ ಆನ್ಲೈನ್ ರಸಪ್ರಶ್ನೆಯಲ್ಲಿ ಭಾಗಿಯಾಗುವುದು, ಇದರಲ್ಲಿ ಹೆಚ್ಚು ಅಂಕ ಗಳಿಸಿದವರು ಆಯ್ಕೆ ಮಾಡಿದ ವಿಷಯದ ಕುರಿತು 500 ಪದಮಿತಿಯ ಪ್ರಬಂಧ ಸಲ್ಲಿಸುವುದು ಹಾಗೂ ಜಿಲ್ಲೆಯಿಂದ ಆಯ್ಕೆಯಾಗುವ 50 ಪ್ರಬಂಧದ ಯುವಲೇಖಕರು ಜಿಲ್ಲಾ ಮಟ್ಟದಲ್ಲಿ ವಿಚಾರ ಮಂಡಿಸಲಿದ್ದಾರೆ. ಇಲ್ಲಿ ಆಯ್ಕೆಯಾದ ಇಬ್ಬರಿಗೆ ರಾಜ್ಯಮಟ್ಟಕ್ಕೆ ಪ್ರವೇಶ ಪಡೆಯಲಿದ್ದು, ಪ್ರಾದೇಶಿಕ ವಿಜೇತರಿಗೆ ದಿಲ್ಲಿಯಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಚಾರ ಮಂಡಿಸುವ ಅವಕಾಶ ಲಭಿಸಲಿದೆ ಎಂದು ಮಾಹಿತಿ ನೀಡಿದರು.