ಉಡುಪಿ ಜಿಲ್ಲಾ ಜೂನಿಯರ್​ ಅಥ್ಲೆಟಿಕ್ಸ್​ ಕೂಟಕ್ಕೆ ಚಾಲನೆ

ಶಾಸಕ ಯಶ್ಪಾಲ್​ ಸುವರ್ಣ ಜಿಲ್ಲಾ ಜೂನಿಯರ್​ ಅಥ್ಲೆಟಿಕ್ಸ್​ ಮೀಟ್​ ಕ್ರೀಡಾಕೂಟ ಉದ್ಘಾಟಿಸಿದರು.
ಶಾಸಕ ಯಶ್ಪಾಲ್​ ಸುವರ್ಣ ಜಿಲ್ಲಾ ಜೂನಿಯರ್​ ಅಥ್ಲೆಟಿಕ್ಸ್​ ಮೀಟ್​ ಕ್ರೀಡಾಕೂಟ ಉದ್ಘಾಟಿಸಿದರು.
Published on
ಉಡುಪಿ: ಕ್ರೀಡೆಯಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಿರಂತರ ವಿವಿಧ ಸ್ಪರ್ಧಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಭಾನುವಾರ ಅಜ್ಜರಕಾಡಿನಲ್ಲಿರುವ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಅಮೆಚೂರ್​ ಅಥ್ಲೆಟಿಕ್ಸ್​ ಅಸೋಸಿಯೇಶನ್​ ಹಾಗೂ ಉಡುಪಿ ಟ್ರ್ಯಾಕ್​ ಅಂಡ್​ ಫೀಲ್ಡ್​ ಕ್ಲಬ್​ ಆಶ್ರಯದಲ್ಲಿ ಜಿಲ್ಲಾ ಜೂನಿಯರ್​ ಅಥ್ಲೆಟಿಕ್ಸ್​ ಮೀಟ್​ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಮೆಚೂರ್​ ಅಥ್ಲೆಟಿಕ್ಸ್​ ಅಸೋಸಿಯೇಶನ್​ ಅಧ್ಯಕ್ಷ ಹರಿಪ್ರಸಾದ್​ ರೈ ವಹಿಸಿದ್ದರು. ಆಭರಣ ಜ್ಯುವೆಲ್ಲರ್ಸ್​ ಜಿಎಂ ವಿನೋದ್​ ಕಾಮತ್​, ಕರ್ನಾಟಕ ಅಥ್ಲೆಟಿಕ್ಸ್​ ಅಸೋಸಿಯೇಶನ್​ ಕಾರ್ಯದರ್ಶಿ ಎ. ರಾಜುವೇಲು, ಎಸ್​ಬಿಐ ಶಾಖಾ ಪ್ರಬಂಧಕ ಲಿಜೈ ಎಸ್​., ಎಲ್​ಐಸಿ ಹಿರಿಯ ಡಿವಿಶನಲ್​ ಮ್ಯಾನೇಜರ್​ ಗಣಪತಿ ಎನ್​. ಭಟ್​, ಕರ್ನಾಟಕ ಅಥ್ಲೆಟಿಕ್ಸ್​ ಅಸೋಸಿಯೇಶನ್​ ಉಪಾಧ್ಯಕ್ಷ ಮಹೇಶ್​ ಠಾಕೂರ್​, ವಕೀಲ ಮಿತ್ರಕುಮಾರ್​ ಶೆಟ್ಟಿ ಹಾಗೂ ಉಡುಪಿ ರನ್ನರ್ಸ್​ ಕ್ಲಬ್​ ಅಧ್ಯಕ್ಷ ಸತೀಶ್​ ಸಾಲ್ಯಾನ್​, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್​ ಕುಮಾರ್​ ಶೆಟ್ಟಿ ಹಾಗೂ ವಕೀಲ ಮೊಹಮ್ಮದ್​ ಹಬೀಬ್​ ಉಪಸ್ಥಿತರಿದ್ದರು. ಸಂಘಟಕ ದಿನೇಶ್​ ಕುಮಾರ್​ ಎ. ಸ್ವಾಗತಿಸಿದರು. ವರದರಾಜ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net