ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 5ರಿಂದ 10 ಸೆಂಟ್ಸ್ ಗರಿಷ್ಠ -20 ಸೆಂಟ್ಸ್ ಜಮೀನಿನಲ್ಲಿ ಮಲ್ಲಿಗೆ ಕೃಷಿ ಮಾಡುವವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಒಂದು ಸೆಂಟ್ಸ್ನಲ್ಲಿ 68 ಗಿಡ ನಾಟಿ ಮಾಡಲಾಗುತ್ತದೆ. ಕಳೆದ 3 ವರ್ಷದಿಂದ ಗಿಡಗಳ ಲೆಕ್ಕದಲ್ಲಿ 1 ಸಾವಿರ ರೂ. ಸಾಲ ಲಭಿಸುತ್ತಿತ್ತು. ಇದೀಗ ಅದನ್ನು ಎಕರೆಗೆ 34 ಸಾವಿರ ರೂ. ಸಾಲ ನೀಡಲು ನಿರ್ಧರಿಸಲಾಗಿದೆ. ಇದು ಗಿಡವೊಂದಕ್ಕೆ 350 ರೂ. ಸಾಲ ಸಿಕ್ಕಂತಾಗುತ್ತದೆ. ಅಲ್ಲದೆ, ಮೊದಲಿಗಿಂತ ಬಹಳ ಕಡಿಮೆ ಮಾಡಿದಂತಾಗಿದೆ. ಈ ಕ್ರಮದಿಂದ ಮಲ್ಲಿಗೆ ಕೃಷಿಕರನ್ನು ನಿರ್ಲಕ್ಷ್ಯ ಮಾಡಿದಂತಾಗುತ್ತದೆ ಎಂದು ರಾಮಕೃಷ್ಣ ಶರ್ಮ ತಿಳಿಸಿದ್ದಾರೆ.