ಎಸ್​ಎಎಸ್​ಎಸ್​ನ ಪ್ರಭಾವಿ ಜಿಲ್ಲೆ ಉಡುಪಿ

ಉಡುಪಿಯಲ್ಲಿ ಆಯೋಜಿಸಿದ್ದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಟಿ.ಬಿ. ಶೇಖರ್​ ಉದ್ಘಾಟಿಸಿದರು. ಕೃಷ್ಣಯ್ಯ, ಜಯರಾಮ್​, ದತ್ತಾತ್ರೇಯ ಶಿಂತ್ರೆ, ಹರಿಯಪ್ಪ ಕೋಟ್ಯಾನ್​, ದಿವಾಕರ್​ ಶೆಟ್ಟಿ, ರಾಧಾಕೃಷ್ಣ ಮೆಂಡನ್​, ಕೆ. ವಿಜಯ್​ ಕೊಡವೂರು ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಟಿ.ಬಿ. ಶೇಖರ್​ ಉದ್ಘಾಟಿಸಿದರು. ಕೃಷ್ಣಯ್ಯ, ಜಯರಾಮ್​, ದತ್ತಾತ್ರೇಯ ಶಿಂತ್ರೆ, ಹರಿಯಪ್ಪ ಕೋಟ್ಯಾನ್​, ದಿವಾಕರ್​ ಶೆಟ್ಟಿ, ರಾಧಾಕೃಷ್ಣ ಮೆಂಡನ್​, ಕೆ. ವಿಜಯ್​ ಕೊಡವೂರು ಇತರರಿದ್ದರು.
Published on

* ರಾಷ್ಟ್ರೀಯ ಅನ್ನದಾನ ಸಮಿತಿಯ ಅಧ್ಯಕ ಟಿ.ಬಿ. ಶೇಖರ್​ ಶ್ಲಾಘನೆ

* ಉಡುಪಿ ಜಿಲ್ಲಾ ಕಾರ್ಯಕಾರಿಣಿ, ಪದಗ್ರಹಣ ಸಮಾರಂಭ

ಉಡುಪಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಎಸ್​ಎಎಸ್​ಎಸ್​)ನ ಒಂದು ಜಿಲ್ಲಾ ಘಟಕ ಹೊಂದಿರಬೇಕಾದ ಎಲ್ಲ ಅಗತ್ಯ ಸಂಘಟನಾತ್ಮಕ ಅಂಶ, ಕಾರ್ಯ ಹಾಗೂ ಸೇವಾ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಆದರ್ಶ ಜಿಲ್ಲಾ ಘಟಕ ಉಡುಪಿಯಾಗಿದೆ. ಅಲ್ಲದೆ, ಉಡುಪಿ ಜಿಲ್ಲಾ ಘಟಕವು 'ಪ್ರಭಾವಿ ಜಿಲ್ಲೆ' ಎಂದು ಎಸ್​ಎಎಸ್​ಎಸ್​ನ ರಾಷ್ಟ್ರೀಯ ಅನ್ನದಾನ ಸಮಿತಿಯ ಅಧ್ಯಕ್ಷ ಟಿ.ಬಿ. ಶೇಖರ್​ ಶ್ಲಾಘಿಸಿದರು.
ಉಡುಪಿಯ ಖಾಸಗಿ ಹೋಟೆಲ್​ನಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಹಾಗೂ ಉಡುಪಿ ತಾಲೂಕು ಸಮಿತಿ ಮತ್ತು ಕುಂದಾಪುರ ತಾಲೂಕು ಮಹಿಳಾ ಸಮಿತಿಯ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಿತಿಯ ದಕ್ಷಿಣ ಪ್ರಾಂತ ಕಾರ್ಯದರ್ಶಿ ಕೃಷ್ಣಯ್ಯ, ರಾಜ್ಯಾಧ್ಯಕ್ಷ ಜಯರಾಮ್​, ರಾಜ್ಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಶಿಂತ್ರೆ, ಜಿಲ್ಲಾ ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್​, ಗೌರವ ಸಲಹೆಗಾರ ದಿವಾಕರ್​ ಶೆಟ್ಟಿ, ರಾಜ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ್​ ಕುಮಾರ್​, ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್​, ಉಪಾಧ್ಯಕ್ಷರಾದ ಕೆ. ವಿಜಯ್​ ಕೊಡವೂರು, ಗೋಪಾಲ್​ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜಿತ್​ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಯು. ಆಚಾರ್ಯ, ಪ್ರಧಾನ ಕಾರ್ಯದರ್ಶಿ ತಾರಾ ಸತೀಶ್​, ಉಡುಪಿ ತಾಲೂಕು ನೂತನ ಅಧ್ಯಕ್ಷ ಸತೀಶ್​ ಕುಲಾಲ್​, ಪ್ರಧಾನ ಕಾರ್ಯದರ್ಶಿ ಅಶ್ವತ್ಥ ಆಚಾರ್ಯ, ಕುಂದಾಪುರ ತಾಲೂಕು ಮಹಿಳಾ ಘಟಕದ ನೂತನ ಅಧ್ಯಕ್ಷೆ ಸುಶ್ಮಾ ಗಿರೀಶ್​, ಪ್ರಧಾನ ಕಾರ್ಯದರ್ಶಿ ಶ್ವೇತಾ ಶ್ರೀನಿಧಿ, ಜಿಲ್ಲಾ ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net