ಸರ್ಕಾರಿ ಕಾಮಗಾರಿಗಳ ಬಾಕಿ ಹಣ ಕೊಡಿಸಿ

ಸರ್ಕಾರಿ ಕಾಮಗಾರಿಗಳ ಬಾಕಿ ಬಿಲ್​ ಕೊಡಿಸುವಂತೆ ಒತ್ತಾಯಿಸಿ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಅವರಿಗೆ ಜಿಲ್ಲಾ ಗುತ್ತಿಗೆದಾರರ ಸಂ ಮನವಿ ಸಲ್ಲಿಸಿತು. ಜಿ.ಗೋಕುಲ್​ ಶೆಟ್ಟಿ, ಎ.ಬಿ. ಶೆಟ್ಟಿ, ಪ್ರವಿಣಕುಮಾರ್​ ಶೆಟ್ಟಿ, ಪ್ರಮೋದ್​ ಶೆಟ್ಟಿ, ಪವನ್​ ಎಸ್​.ಡಿ., ಫಿಲಿಪ್​ ಡಿ'ಕೋಸ್ಟಾ ಇತರರಿದ್ದರು.
ಸರ್ಕಾರಿ ಕಾಮಗಾರಿಗಳ ಬಾಕಿ ಬಿಲ್​ ಕೊಡಿಸುವಂತೆ ಒತ್ತಾಯಿಸಿ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಅವರಿಗೆ ಜಿಲ್ಲಾ ಗುತ್ತಿಗೆದಾರರ ಸಂ ಮನವಿ ಸಲ್ಲಿಸಿತು. ಜಿ.ಗೋಕುಲ್​ ಶೆಟ್ಟಿ, ಎ.ಬಿ. ಶೆಟ್ಟಿ, ಪ್ರವಿಣಕುಮಾರ್​ ಶೆಟ್ಟಿ, ಪ್ರಮೋದ್​ ಶೆಟ್ಟಿ, ಪವನ್​ ಎಸ್​.ಡಿ., ಫಿಲಿಪ್​ ಡಿ'ಕೋಸ್ಟಾ ಇತರರಿದ್ದರು.
Published on

* ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘ ಒತ್ತಾಯ

* ವಿಧಾನಸೌಧದಲ್ಲಿ ಜಿಲ್ಲೆಯ ಶಾಸಕರಿಗೆ ಮನವಿ

ಉಡುಪಿ: ಕಳೆದ ಮೂರು ವರ್ಷದಿಂದ ಸರ್ಕಾರಿ ಕಾಮಗಾರಿಗಳ ಬಿಲ್​ ಬಾಕಿ ಇದ್ದು, ಆರ್ಥಿಕ ಮುಗ್ಗಟ್ಟಿನಿಂದ ಉಡುಪಿ ಜಿಲ್ಲಾ ಗುತ್ತಿಗೆದಾರರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಜಿಲ್ಲೆಯ ಶಾಸಕರಿಗೆ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಗೋಕುಲ್​ ಶೆಟ್ಟಿ ಒತ್ತಾಯ ಮಾಡಿದ್ದಾರೆ.
ಜಿಲ್ಲಾ ಸಂಘದ ನಿಯೋಗದೊಂದಿಗೆ ಮಂಗಳವಾರ (ಮಾ.24) ಬೆಂಗಳೂರು ವಿಧಾನಸೌಧದಲ್ಲಿರುವ ಉಡುಪಿ ಜಿಲ್ಲೆಯ ಶಾಸಕರಾದ ಸುನೀಲ್​ ಕುಮಾರ್​ (ಕಾರ್ಕಳ), ಗುರುರಾಜ್​ ಗಂಟಿಹೊಳೆ (ಬೈಂದೂರು), ಯಶಪಾಲ್​ ಸುವರ್ಣ (ಉಡುಪಿ), ಕಿರಣಕುಮಾರ್​ ಕೊಡ್ಗಿ (ಕುಂದಾಪುರ) ಹಾಗೂ ಗುರ್ಮೆ ಸುರೇಶ್​ ಶೆಟ್ಟಿ (ಕಾಪು) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದರು.

ನಿರ್ಮಾಣ ಕ್ಷೇತ್ರಕ್ಕೆ ತೊಡಕು

ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮ, ಸಮಯ ಹಾಗೂ ಸಂಪನ್ಮೂಲ ಹೂಡಿಕೆ ಮಾಡಿದ್ದು, ಸರ್ಕಾರದಿಂದ ಬಾಕಿ ಹಣ ಬಾರದೆ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಬಾಕಿ ಬಿಲ್​ಗಳ ವಿಳಂಬದಿಂದ ನಿರ್ಮಾಣ ಕ್ಷೇತ್ರದ ಮೇಲೆ ದುಷ್ಪರಿಣಾಮ ಆಗುತ್ತಿದೆ. ನಮ್ಮ ನ್ಯಾಯಸಮ್ಮತ ಹಣ ಶ್ರೀ ಬಿಡುಗಡೆ ಮಾಡಿಸುವಲ್ಲಿ ಜಿಲ್ಲೆಯ ಶಾಸಕರು ಸರ್ಕಾರಕ್ಕೆ ಶಿಾರಸು ಮಾಡಬೇಕು. ಆ ನಿರೀಕ್ಷೆಯಲ್ಲಿ ನಾವಿರುತ್ತೇವೆ ಎಂದರು.
ಮನವಿ ಸ್ವೀಕರಿಸಿದ ಎಲ್ಲ ಶಾಸಕರು ಗುತ್ತಿಗೆದಾರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಸಂಬಂಧಿತ ಅಧಿಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ವಿಷಯ ಮುಂದಿಟ್ಟು ಬಾಕಿ ಬಿಲ್​ ಬಿಡುಗಡೆಗೆ ತ್ವರಿತ ಕ್ರಮ ಕೈಗೊಳ್ಳಲು ಸದನದಲ್ಲಿಯೂ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾದ ಎ.ಬಿ. ಶೆಟ್ಟಿ, ಪ್ರಮೋದ್​ ಶೆಟ್ಟಿ, ಸಲಹೆಗಾರ ಪವನ್​ ಎಸ್​.ಡಿ., ಹಿರಿಯ ಗುತ್ತಿಗೆದಾರರಾದ ಫಿಲಿಪ್​ ಡಿ'ಕೋಸ್ಟಾ, ಗಣೇಶ್​ ಪುತ್ರನ್​, ಸುನೀಲ್​ ಶೆಟ್ಟಿ ಹೇರಿಕುದ್ರು, ಗ್ರೇಸನ್​ ಪಾಯಸ್​, ಸುಮಿತ್​ ಹೆಗ್ಡೆ, ಅಜಿತ್​ ಶೆಟ್ಟಿ, ದೀಪಕ್​ ಶೆಟ್ಟಿ ಹಾಲಾಡಿ, ಗಣೇಶ್​ ಶೆಟ್ಟಿ ಬಿದ್ಕಲ್ಕಟ್ಟೆ, ಸಂತೋಷ್​ ಶೆಟ್ಟಿ ಗೋಳಿಯಂಗಡಿ ಹಾಗೂ ಕಿರಿಯ ಗುತ್ತಿಗೆದಾರರು ಉಪಸ್ಥಿತರಿದ್ದರು.
"

ರಾಜ್ಯದಲ್ಲಿ ಮೂರು ವರ್ಷದಲ್ಲಿ ನಡೆದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿ ಉಡುಪಿ ಜಿಲ್ಲೆಯದ್ದೂ ಸೇರಿ ಸರ್ಕಾರದಿಂದ ಒಟ್ಟು 37 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ನಮಗೀಗ ಬ್ಯಾಂಕ್​ ಸಾಲಗಳ ಬಡ್ಡಿ ಭಾರ ಹೆಚ್ಚಾಗುತ್ತಿದೆ. ಕಾರ್ಮಿಕರ ವೇತನ ಪಾವತಿ, ನಿರ್ಮಾಣ ಸಾಮಗ್ರಿ ನೀಡಿದವರಿಗೆ ಹಣ ನೀಡಲು ವಿಳಂಬ ಆಗುತ್ತಿದೆ. ಸಣ್ಣ ಗುತ್ತಿಗೆದಾರರಿಗೆ ಕುಟುಂಬ ನಿರ್ವಹಣೆಗೂ ತೊಡಕಾಗುತ್ತಿದೆ. ಗುತ್ತಿಗೆದಾರರಿಗೆ ಹೊಸ ಕಾಮಗಾರಿ ಕೈಗೊಳ್ಳಲೂ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆಗೆ ತ್ವರಿತ ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net