ಉಳ್ತೂರಿಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ

ಉಳ್ತೂರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ ನೀಡಿದರು. ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಜಿಲ್ಲಾ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ ಪಿ., ಕಾರ್ಯಪಾಲಕ ಅಭಿಯಂತ ಅರುಣ್ ಕೆ., ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕಾರ್ ಉಪಸ್ಥಿತರಿದ್ದರು.
ಉಳ್ತೂರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ ನೀಡಿದರು. ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಜಿಲ್ಲಾ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ ಪಿ., ಕಾರ್ಯಪಾಲಕ ಅಭಿಯಂತ ಅರುಣ್ ಕೆ., ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕಾರ್ ಉಪಸ್ಥಿತರಿದ್ದರು.
Published on
ಕೋಟ: ಉಳ್ತೂರಿನಲ್ಲಿ ಸಾಲಿಗ್ರಾಮ ಪಪಂ ವತಿಯಿಂದ ಖರೀದಿಸಲ್ಪಟ್ಟ ಜಾಗದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬುಧವಾರ ಭೇಟಿ ನೀಡಿದರು.
ಗ್ರಾಮಸ್ಥರು ಸ್ಥಳದಲ್ಲಿ ಯಾವುದೇ ಘಟಕ ನಿರ್ಮಾಣ ಮಾಡದಂತೆ ಆಕ್ಷೇಪಣೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಯವರು ಸಾರ್ವಜನಿಕರಲ್ಲಿ ಸರ್ಕಾರದ ಯೋಜನೆ ಉಪಯೋಗ, ಸದುಪಯೋಗದ ಬಗ್ಗೆ ಮನವರಿಕೆ ಮಾಡಿದರು.
ಸಾಲಿಗ್ರಾಮ ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್, ಸ್ಥಳೀಯರಲ್ಲಿ ಮುಂದಿನ ದಿನಗಳಲ್ಲಿ ಗ್ರಾಪಂ ಕೂಡ ಎನ್‌ಜಿಟಿ ನಿರ್ದೇಶನ ಪಾಲಿಸಬೇಕಾಗುತ್ತದೆ. ಸುತ್ತಮುತ್ತಲಿನ ಗ್ರಾಪಂ ಬಳಸಿದ ನೀರನ್ನು ಈ ಘಟಕದಲ್ಲಿ ವಿಲೇ ಮಾಡಿದ್ದಲ್ಲಿ ಗ್ರಾಪಂಗೂ ಇನ್ಫಾಸ್ಟ್ರಕ್ಚರ್‌ನ ಮೊತ್ತವನ್ನು ಉಳಿಸಬಹುದಾಗಿ ತಿಳಿಸಿದರು.
ಈ ಬಗ್ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಜಿಲ್ಲಾಧಿಕಾರಿಯವರು ಉಳ್ತೂರು ಗ್ರಾಮಸ್ಥರನ್ನು ಬೈಂದೂರು ಪಪಂ ಮತ್ತು ಕಾಪು ಪುರಸಭೆಯಲ್ಲಿನ ಘಟಕ ವೀಕ್ಷಿಸಲು ಕರೆದೊಯ್ಯುವಂತೆ ಮುಖ್ಯಾಧಿಕಾರಿಯವರಿಗೆ ಸೂಚಿದರು.
ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಜಿಲ್ಲಾ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ ಪಿ., ಕಾರ್ಯಪಾಲಕ ಅಭಿಯಂತ ಅರುಣ್ ಕೆ., ಅಧಿಕಾರಿಗಳು, ಸಿಬ್ಬಂದಿ, ವಲಯ ಅರಣ್ಯಾಧಿಕಾರಿ, ಉಳ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net