ಟಿಎಂಸಿ ಅಟ್ಟಹಾಸಕ್ಕೆ 'ಕಮಲ' ಬ್ರೇಕ್​

ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ.
ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ.
Published on

* ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಅಭಿಪ್ರಾಯ

* ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುಗಾರಂಭ  

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಆಡಳಿತ ಹಾಗೂ ದೇಶದ ಸುಭದ್ರತೆಗಾಗಿ ಪಶ್ಚಿಮ ಬಂಗಾಲದ ಜನರು ಬಿಜೆಪಿಗೆ ಗೆಲುವಿನ ವರ ನೀಡಿದ್ದಾರೆ. ಇದು ಬಿಜೆಪಿಯ ಸಂಘಟನಾ ಶಕ್ತಿಗೆ ಹೊಸ ಹುಮ್ಮಸ್ಸು ನೀಡಿದ್ದು, ಟಿಎಂಸಿ ಅಟ್ಟಹಾಸಕ್ಕೆ ಬ್ರೇಕ್​ ಬಿದ್ದಿದೆ. ಅಲ್ಲಿನ ಫಲಿತಾಂಶದಿಂದ ರಾಷ್ಟ್ರದಲ್ಲಿ ದೇಶದ್ರೋಹಿಗಳ ಶಕ್ತಿ ಕ್ಷೀಣಿಸುತ್ತಿರುವ ಲಕ್ಷಣ ಕಂಡುಬಂದಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.
ರಾಜಕೀಯ ಹಿಂಸಾಚಾರ, ಓಲೈಕೆ ರಾಜಕಾರಣ, ಬಾಂಗ್ಲಾ ಅಕ್ರಮ ವಲಸಿಗರ ಪುಂಡಾಟಗಳಿಂದಲೇ ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅವಿಚ್ಛಿನ್ನ ಸಂಘಟನಾ ಶಕ್ತಿ, ಗೆಲ್ಲಲೇಬೇಕೆಂಬ ಹಠ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕಾರಣವಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಗೆ ಮನಸೋತ ಜನ

ನರೇಂದ್ರ ಮೋದಿ ಅವರು ಅವರು ನೀಡುತ್ತಿರುವ ಅಭಿವೃದ್ಧಿ ಅಜೆಂಡಾಗಳಿಗೆ ಬಂಗಾಲದ ಜನ ಮನಸೋತು ಸ್ಪಂದಿಸಿದ್ದಾರೆ. ಮೂಲಸೌಕರ್ಯ, ಬಡವರ ಕಲ್ಯಾಣ ಯೋಜನೆ, ಡಿಜಿಟಲ್​ ಸೌಲಭ್ಯಗಳ ವಿಸ್ತರಣೆ, ಗ್ರಾಮೀಣ ಸಂಪರ್ಕ ವೃದ್ಧಿ ಹೀಗೆ ಅನೇಕ ಜನಪರ ಕಾರ್ಯಗಳು ಅಲ್ಲೊಇನ ಜನಮನದಲ್ಲಿ ವಿಶ್ವಾಸ ಮೂಡಿಸಿತ್ತು. 

ಐತಿಹಾಸಿಕ ಗೆಲುವು

ಹಿಂಸಾಚಾರ, ಮತಬ್ಯಾಂಕ್​ ರಾಜಕೀಯ, ವಲಸೆ ವಿವಾದ ಮತ್ತು ಆಡಳಿತಾತ್ಮಕ ಸಂಘರ್ಷದ ನಡುವೆಯೂ ಬಿಜೆಪಿ ಬೆಂಬಲ ಗಳಿಸಿರುವುದು ಸ್ಪಷ್ಟ ಸಂದೇಶವಾಗಿದೆ. ಅಲ್ಲಿನ ಜನರು ಭಯದ ರಾಜಕಾರಣಕ್ಕಿಂತ ಭದ್ರತೆ, ಸ್ಥಿರತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿದ್ದರಿಂದ ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಯುಗಾರಂಭ ಆಗಿದೆ ಎಂದು ಶ್ರೀನಿಧಿ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net