ಮೀನುಗಾರರಿಗೆ ಹೆಚ್ಚುವರಿ ಅನುದಾನ

ಉಡುಪಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಕುಮಾರಸ್ವಾಮಿ ಬಿ.ವಿ., ಹರೀಶ್​, ಮಂಜುನಾಥ್​ ಇತರರಿದ್ದರು.
ಉಡುಪಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಕುಮಾರಸ್ವಾಮಿ ಬಿ.ವಿ., ಹರೀಶ್​, ಮಂಜುನಾಥ್​ ಇತರರಿದ್ದರು.
Published on

* ಪ್ರಸ್ತಾವನೆ ಸಲ್ಲಿಸಲು ಡಿಸಿ ಸ್ವರೂಪಾ ಸೂಚನೆ

* ಮತ್ಸ್ಯ ಸಂಪದ ಯೋಜನೆಯ ಸಭೆ

ಉಡುಪಿ: ಮೀನುಗಾರರ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆ ಹಾಗೂ ಕಾರ್ಯಕ್ರಮ ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಹೆಚ್ಚು ಫಲಾನುಭವಿಗಳಿದ್ದು, ಪ್ರಸ್ತುತ ನಿಗದಿ ಮಾಡಿರುವ ಸೌಲಭ್ಯ ಹೆಚ್ಚಿನ ಜನರಿಗೆ ತಲುಪುತ್ತಿಲ್ಲ. ಹೀಗಾಗಿ ಹೆಚ್ಚುವರಿ ಗುರಿ, ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ (ಫೆ.21) ಆಯೋಜಿಸಿದ್ದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಮಾತನಾಡಿದರು.

ಯೋಜನೆಯ ಪ್ರಗತಿ ಸಾಧಿಸಿ

ಜಿಲ್ಲೆಯಲ್ಲಿ 5,598 ಮೋಟಾರೀಕೃತ ನಾಡದೋಣಿ, 2,017 ಯಾಂತ್ರೀಕೃತ ಮೀನುಗಾರಿಕಾ ದೋಣಿ ಹಾಗೂ 447 ಸಾಂಪ್ರದಾಯಿಕ ನಾಡದೋಣಿಗಳು ಇವೆ. ಕಳೆದ ಸಾಲಿನಲ್ಲಿ ಪಿಎಂಎಂಎಸ್​ವೈ ಯೋಜನೆಯಡಿ ಪಚ್ಚಿಲೆ ಕೃಷಿ ಮಸೆಲ್ಸ್​, ಕಲ್ಲ, ಕ್ಲಾಮ್ಸ್​, ಮುತ್ತು ಇತ್ಯಾದಿ ಕಾರ್ಯಕ್ರಮಗಳ ಶೇ.100 ಪ್ರಗತಿ ಸಾಧಿಸಬೇಕು. ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ$ ಸಂಪದ ಯೋಜನೆಯಡಿ ವಿವಿಧ ಘಟಕಗಳ ಸ್ಥಾಪನೆಗೆ ಜಿಲ್ಲೆಯ 6 ಫಲಾನುಭವಿಗಳಿಗೆ ಸುಮಾರು 200 ಲಕ್ಷ ರೂ. ಸಹಾಯಧನ ಒದಗಿಸಲಾಗಿದೆ ಎಂದರು.
ಕಳೆದ ಸಾಲಿನಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆಯ ಯಾಂತ್ರೀಕೃತ ದೋಣಿ ನಿರ್ಮಿಸಲು ಸಹಾಯ ಯೋಜನೆಯಡಿ ಜಿಲ್ಲೆಗೆ ಸಾಮಾನ್ಯ ವರ್ಗದಡಿ 8 ಗುರಿ ನಿಗದಿ ಮಾಡಲಾಗುದ್ದು 9 ಅರ್ಜಿ ಸಲ್ಲಿಕೆಯಾಗಿವೆ. ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.
ಸಭೆಯಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ಬಿ.ವಿ., ಲೀಡ್​ ಬ್ಯಾಂಕ್​ನ ಮೆನೇಜರ್​ ಹರೀಶ್​, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​, ಆಯ್ಕೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
"

ಮಲ್ಪೆಯು ಸರ್ವಋತು ಬಂದರಾಗಿದ್ದು, ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮೀನುಗಾರರು ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸರ್ಕಾರದಿಂದ ವಿವಿಧ ಯೋಜನೆಯಡಿ ಇರುವ ಆರ್ಥಿಕ ಸೌಲಭ್ಯ, ಸಹಾಯಧನ ಕುರಿತ ಮಾಹಿತಿ ತಲುಪಿಸಬೇಕು. ತನ್ಮೂಲಕ ಫಲಾನುಭವಿಗಳನ್ನಾಗಿಸಿ ಸ್ವಾವಲಂಬಿ ಜೀವನಕ್ಕೆ ಅವಕಾಶ ಮಾಡಿಕೊಡಬೇಕು. ಪ್ರಸ್ತುತ ನಿಗದಿ ಮಾಡಿರುವ ಸೌಲಭ್ಯ ಹೆಚ್ಚಿನ ಜನರಿಗೆ ತಲುಪುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net