ಜಿಲ್ಲೆಗೆ ಬೇಕಿದೆ ಪ್ರವಾಸಿ ಮಾರ್ಗದರ್ಶಿಗಳು

ಉಡುಪಿಯಲ್ಲಿ 'ಉಡುಪಿ ಕಂಟೆಂಟ್​ ಕ್ರಿಯೇಟರ್ಸ್ ಮೀಟ್​' ವಿಚಾರ ಸಂಕಿರಣ ನಡೆಯಿತು. ಅಜಯ್​ ಪಿ. ಶೆಟ್ಟಿ, ಚೇತನ್​ ನೈಲಾಡಿ, ಕೆ. ಲಕ್ಷ್ಮೀನಾರಾಯಣ ನಾಯಕ್​, ಡಾ. ಗಣೇಶ್​ ಪ್ರಸಾದ್​ ಜಿ. ನಾಯಕ್​, ಲಕ್ಷ್ಮೀ ಶೆಣೈ, ಸ್ನೇಹಾ ವಿನೋದ್​ ಪೈ, ಶ್ರೇಯಾ ಮರವಂತೆ, ಶಾಂಭವಿ ಭಂಡಾರ್ಕರ್​, ಶ್ರೀನಿಧಿ ಹಂದೆ, ಸುಧೀರ್​ ನಾಯಕ್​, ರಾಘವೇಂದ್ರ ಪ್ರಭು ಕರ್ವಾಲ್​ ಇತರರಿದ್ದರು.
ಉಡುಪಿಯಲ್ಲಿ 'ಉಡುಪಿ ಕಂಟೆಂಟ್​ ಕ್ರಿಯೇಟರ್ಸ್ ಮೀಟ್​' ವಿಚಾರ ಸಂಕಿರಣ ನಡೆಯಿತು. ಅಜಯ್​ ಪಿ. ಶೆಟ್ಟಿ, ಚೇತನ್​ ನೈಲಾಡಿ, ಕೆ. ಲಕ್ಷ್ಮೀನಾರಾಯಣ ನಾಯಕ್​, ಡಾ. ಗಣೇಶ್​ ಪ್ರಸಾದ್​ ಜಿ. ನಾಯಕ್​, ಲಕ್ಷ್ಮೀ ಶೆಣೈ, ಸ್ನೇಹಾ ವಿನೋದ್​ ಪೈ, ಶ್ರೇಯಾ ಮರವಂತೆ, ಶಾಂಭವಿ ಭಂಡಾರ್ಕರ್​, ಶ್ರೀನಿಧಿ ಹಂದೆ, ಸುಧೀರ್​ ನಾಯಕ್​, ರಾಘವೇಂದ್ರ ಪ್ರಭು ಕರ್ವಾಲ್​ ಇತರರಿದ್ದರು.
Published on

* ಉದ್ಯಮಿ ಅಜಯ್​ ಪಿ. ಶೆಟ್ಟಿ ಅಭಿಪ್ರಾಯ

* ಉಡುಪಿಯಲ್ಲಿ ವಿಚಾರ ಸಂಕಿರಣ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲೆಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇಲ್ಲಿನ ಆಹಾರ, ಆಚಾರ-ವಿಚಾರ ಮತ್ತು ಆತಿಥ್ಯಕ್ಕೂ ಸಹ ಜಾಗತಿಕ ಮನ್ನಣೆ ದೊರೆತಿದೆ. ವಿಶ್ವಾದ್ಯಂತ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಪುರಾತನ ದೇವಸ್ಥಾನ, ಐತಿಹಾಸಿಕ ತಾಣಗಳ ಬಗ್ಗೆ ನಿಖರ ಮಾಹಿತಿ ನೀಡಲು ಪ್ರವಾಸಿ ಮಾರ್ಗದರ್ಶಕರ ಅಗತ್ಯತೆಯಿದೆ. ಸರ್ಕಾರ ಇದಕ್ಕೆ ಪ್ರಾಶಸ್ತ್ಯ ನೀಡಿದರೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉಡುಪಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದು ಉದ್ಯಮಿ ಅಜಯ್​ ಪಿ. ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿಯ ವೈಟ್​ ಲೋಟಸ್​ ಸಭಾಂಗಣದಲ್ಲಿ 'ಉಡುಪಿಗೆ ಬನ್ನಿ' ನೇತೃತ್ವದಲ್ಲಿ ಭಾನುವಾರ (ಫೆ.8) ಆಯೋಜಿಸಿದ್ದ 'ಉಡುಪಿ ಕಂಟೆಂಟ್​ ಕ್ರಿಯೇಟರ್ಸ್​ ಮೀಟ್​' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲಾವಿದ ಚೇತನ್​ ನೈಲಾಡಿ ಮಾತನಾಡಿ, ಕುಂದಗನ್ನಡ, ಉಡುಪಿ ಹಾಗೂ ಕುಂದಾಪುರದ ಇತಿಹಾಸ, ಸ್ಥಳೀಯ ಸಾಂಸ್ಕೃತಿಕ ಆಚಾರ&ವಿಚಾರಗಳಲ್ಲಿ ಸಾಮ್ಯತೆ ಮತ್ತು ಭಿನ್ನತೆಗಳಿವೆ ಎಂದರು.
ಹಲವಾರು ದೇಶಗಳ ನಾಣ್ಯ, ನೋಟು ಹಾಗೂ ಅಂಚೆ ಚೀಟಿಗಳ ಅಪಾರ ಸಂಗ್ರಹ ಹೊಂದಿರುವ ಮಣಿಪಾಲ ಮಾಹೆಯ ಉದ್ಯೋಗಿ ಕೆ. ಲಕ್ಷ್ಮೀನಾರಾಯಣ ನಾಯಕ್​ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಮಟ್ಟದ ರೀಲ್ಸ್​ ಸ್ಪರ್ಧೆಯಲ್ಲಿ ವಿಜೇತರಾದ ಆರ್ಯನ್​ ಲೋಬೋ ಅವರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಯಿತು. 'ಮೈಸೂರು ಕಥೆಗಳು' ಖ್ಯಾತಿಯ ಧರ್ಮೇಂದ್ರ ಅವರು ಆನ್​ಲೈನ್​ ಮೂಲಕ ಶುಭ ಹಾರೈಸಿದರು.
ಲಕ್ಷ್ಮೀ ಶೆಣೈ, ಸ್ನೇಹಾ ವಿನೋದ್​ ಪೈ, ಶ್ರೇಯಾ ಮರವಂತೆ, ಶಾಂಭವಿ ಭಂಡಾರ್ಕರ್​ ಹಾಗೂ ಶ್ರೀನಿಧಿ ಹಂದೆ ವಿವಿಧ ವಿಚಾರಗೋಷ್ಠಿ ನಡೆಸಿಕೊಟ್ಟರು.
ಸುಧೀರ್​ ನಾಯಕ್​, ಪ್ರತಾಪ್​ ಬಂಗೇರ, ಶ್ಯಾರನ್​ ಪಿರೇರ, ದೀಕ್ಷಿತಾ ಕೋಟ್ಯಾನ್​, ಚೈತ್ರಾ ಶೆಟ್ಟಿ, ಹರ್ಷಿತಾ ರಾವ್​, ದೀಪಿಕಾ ಶೇಟ್​, ಪ್ರಕ್ಷಿತ್​ ಭಟ್​, ಅಂಕಿತ್​, ವಿವೇಕ್​, ಪ್ರಸನ್ನ, ಮೇಧಾ ನಾಯಕ್​, ಗಣಪತಿ ನಾಯಕ್​ ಉಪಸ್ಥಿತರಿದ್ದರು.
ಉಡುಪಿಗೆ ಬನ್ನಿ ಸಂಯೋಜಕ ಡಾ. ಗಣೇಶ್​ ಪ್ರಸಾದ್​ ಜಿ. ನಾಯಕ್​ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net