ಮೇ 23ರಂದು ಬೆಳಿಗ್ಗೆ 10:30ಕ್ಕೆ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ. ಮಾಹೆ ಮಣಿಪಾಲದ ಎಂಸಿಎಚ್ಪಿ ಡೀನ್ ಪ್ರೊ. ಡಾ. ಅರುಣ್ ಮಯ್ಯ ಹಾಗೂ ಉಡುಪಿ ಶಾರದಾ ವಸತಿ ಶಾಲೆಯ ನಿರ್ದೇಶಕ ವಿದ್ಯಾವಂತ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಪ್ರತಿಕ್ ಬಾಯಲ್, ರೋಟರಿ ಜಿಲ್ಲಾ ನಿಯುಕ್ತ ಗವರ್ನರ್ ಬಿ.ಎಂ. ಭಟ್, ಅರ್ಚನಾ ಟ್ರಸ್ಟ್ನ ಟ್ರಸ್ಟಿ ಡಾ. ಪದ್ಮರಾಜ್ ಹೆಗ್ಡೆ, ಆಸರೆ ಸಂಸ್ಥೆಯ ಸಂಚಾಲಕ ಶ್ರೀಧರ್ ಕೆ. ರಾವ್, ಉಡುಪಿ ರೆಡ್ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ್ ಎಕ್ಕಾರ್, ಉಡುಪಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ, ಹೈದರಾಬಾದ್ನ ವಿಶ್ವವಿದ್ಯಾಲಯದ ದಿವ್ಯಾಂಗ ಸಾರಥಿ ಯೋಜನೆಯ ಸಹ-ಸಂಶೋಧಕಿ ಡಾ. ಉಮ್ಮೆ ಸಲ್ಮಾ ಹಾಗೂ ಉದ್ಯಮಿ ಪುರುಷೋತ್ತಮ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಪರಿವಾರ್ ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಸುದೀಪ್ ಗೋಯಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.