ಹೆಬ್ರಿ-ಪರ್ಕಳ ಹೆದ್ದಾರಿ ಕಾಮಗಾರಿಗೆ ಸರ್ಕಾರ ಅನುಮತಿ

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
Published on

* ಸಂಸದ ಕೋಟ ಪೂಜಾರಿ ವಿಶೇಷ ಪ್ರಯತ್ನ

* ಇಲಾಖಾ ಅಧಿಕಾರಿಗಳ ಮಾಹಿತಿ

* ಮಾರ್ಗದ ರಸ್ತೆ ಕಡಿಯಲು ಸಮ್ಮತಿ

ಉಡುಪಿ: ಜಿಲ್ಲೆಯ ಹೆಬ್ರಿ-ಪರ್ಕಳ ರಾಷ್ಟ್ರೀಯ ಹೆದ್ದಾರಿ (169-ಎ) ಕಾಮಗಾರಿಗೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿಗಾಗಿ ಮರ ಕಡಿಯಲು ಸರ್ಕಾರ ಅನುಮತಿ ನೀಡಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ವಿಶೇಷ ಪ್ರಯತ್ನದಿಂದ ರಸ್ತೆ ಕಾಮಗಾರಿಗೆ ಇದ್ದ ತೊಡಕು ನಿವಾರಣೆ ಆಗಿದೆ ಎಂದು ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಬ್ರಿ-ಪರ್ಕಳ ಮಧ್ಯದ ಮುಳ್ಳುಗುಡ್ಡೆ ಸಮೀಪ 1.2 ಕಿಮೀ ರಸ್ತೆಯು ಅರಣ್ಯ ಇಲಾಖೆಯ ಜಾಗದಲ್ಲಿ ಹಾದು ಹೋಗಲಿತ್ತು. ಹೀಗಾಗಿ 2023ರಿಂದ ಪರಿವೇಶ್​ ವೆಬ್​ಸೈಟ್​ನಲ್ಲಿ ಅರಣ್ಯ ಇಲಾಖೆಯ ಅನುಮೋದನೆ ಲಭಿಸಿರಲಿಲ್ಲ. ಅದರಿಂದ ಈ ಭಾಗದಲ್ಲಿ ರಸ್ತೆ ಕಾಮಗಾರಿ ನಡೆದಿರಲಿಲ್ಲ. 
ವರ್ಷಗಳಿಂದ ಬಾಕಿಯಿದ್ದ ರಸ್ತೆ ಕಾಮಗಾರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಸತತ ಮತ್ತು ವಿಶೇಷ ಪ್ರಯತ್ನದಿಂದಾಗಿ ರಾಜ್ಯ ಸರ್ಕಾರದಿಂದ ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ 2.35 ಹೆಕ್ಟೇರ್​ ಪ್ರದೇಶ ಹಾಗೂ ಹೆಬ್ರಿ ಗ್ರಾಮದ 0.064 ಹೆಕ್ಟೇರ್​ ಸೇರಿ ಒಟ್ಟು 2.49 ಹೆಕ್ಟೇರ್​ ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ರಸ್ತೆ ಕಾಮಗಾರಿ ನಿರ್ವಹಿಸಲು ಅನುಮೋದನೆ ಲಭಿಸಿದೆ.
ಅರಣ್ಯ-ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ (ಅರಣ್ಯ-ಸಿ ಮತ್ತು ಸಮನ್ವಯ) ಅಧೀನ ಕಾರ್ಯದರ್ಶಿ ಡಿ.ಪಿ. ಆನಂದಮಣಿ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥ)ಗೆ ಸುತ್ತೋಲೆ ರವಾನಿಸಿದ್ದಾರೆ. 
ಸರ್ಕಾರದ ಅನುಮೋದನೆಯ ಹಿನ್ನೆಲೆಯಲ್ಲಿ ಉದ್ದೇಶಿತ ಹೆದ್ದಾರಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಸಂಸದ ಕೋಟ ಪೂಜಾರಿ ಎನ್​.ಎಚ್​. ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net