'ವಿಷನ್​-2030--35' ಚಿಂತನ-ಮಂಥನ ಸಭೆ 12ರಂದು

ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮ್ಮುಂಜೆ ಪ್ರಭಾಕರ್​ ನಾಯಕ್​ ಮಾತನಾಡಿದರು. ಡಾ. ವಿಜಯೇಂದ್ರ ವಿ. ರಾವ್​, ಪಿ.ನಟರಾಜ್​ ಪ್ರಭು, ಅನೀಶ್​ ಪೈ, ಭಗವಾನ್​ ದಾಸ್​ ಇದ್ದರು.
ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮ್ಮುಂಜೆ ಪ್ರಭಾಕರ್​ ನಾಯಕ್​ ಮಾತನಾಡಿದರು. ಡಾ. ವಿಜಯೇಂದ್ರ ವಿ. ರಾವ್​, ಪಿ.ನಟರಾಜ್​ ಪ್ರಭು, ಅನೀಶ್​ ಪೈ, ಭಗವಾನ್​ ದಾಸ್​ ಇದ್ದರು.
Published on

* ಗೌರವ ಕಾರ್ಯದರ್ಶಿ ಡಾ. ವಿಜಯೇಂದ್ರ ವಿ. ರಾವ್​ ಮಾಹಿತಿ 

* ಉಡುಪಿ ಚೇಂರ್ಬಸ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರೀ ಆಯೋಜನೆ

ಉಡುಪಿ: ರಾಜ್ಯದಲ್ಲಿ ಉಡುಪಿಯು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದೆ. ಹೀಗಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಉಡುಪಿ ಚೇಂರ್ಬಸ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರೀ ವತಿಯಿಂದ ಹಾಗೂ ವಿವಿಧ 6 ಸಂಘ-ಸಂಸ್ಥೆಗಳ ಸಹಕಾರದಲ್ಲಿ ಜು.12ರಂದು ಸಂಜೆ 5:30ಕ್ಕೆ ಕಿದಿಯೂರ್​ ಹೋಟೆಲ್​ನ ಶೇಷಶಯನ ಸಭಾಂಗಣದಲ್ಲಿ "ವಿಷನ್​&-2030&-35' ಚಿಂತನ-ಮಂಥನ ಸಭೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವಿಜಯೇಂದ್ರ ವಿ. ರಾವ್​ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಜು.4) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೌಗೋಳಿಕವಾಗಿ ಉಡುಪಿ ಜಿಲ್ಲೆ ಸಣ್ಣದಾಗಿದೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಅಪಾರ ಅವಕಾಶಗಳಿವೆ ಎಂದರು.

ಕುಂದು-ಕೊರತೆ ಸಭೆಯಲ್ಲ

ಈ ಸಭೆಯಲ್ಲಿ ಕ್ರೆಡೈಲ್​, ಸಿವಿಲ್​ ಇಂಜಿನಿಯರ್ಸ್​ ಅಸೋಸಿಯೇಷನ್​, ಬಿಲ್ಡರ್ಸ್​ ಅಸೋಸಿಯೇಷನ್​, ಚಾರ್ಟೆಡ್​ ಅಕೌಂಟೆಂಟ್​ ಅಸೋಸಿಯೇಷನ್​ ಹಾಗೂ ಇನ್ನಿತರ ಸಂಘ& ಸಂಸ್ಥೆಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠರು, ಜಿಲ್ಲೆಯ ಶಾಸಕರು, ಸಂಸದರೂ ಪಾಳ್ಗೊಳ್ಳಲಿದ್ದಾರೆ. ಆದರೆ, ಇದು ಕುಂದು=ಕೊರತೆ ಹೇಳಿಕೊಳ್ಳುವ ಸಭೆಯಲ್ಲ. ಭವಿಷ್ಯದಲ್ಲಿ ಉಡುಪಿಯ ಅಭಿವೃದ್ಧಿಗಾಗಿ ಏನೇನು ಯೋಜನೆ ಮಾಡಬಹುದು ಎಂಬ ಸಮಗ್ರ ಮಾಹಿತಿ ಸಂಗ್ರಹಿಸಿ ಕಾರ್ಯಗತ ಮಾಡಲು ಪೂರಕವಾಗಿ ವಿಶೇಷ ಸಭೆಯಾಗಿದೆ. ಪೇಜಾವರ ಶ್ರೀಗಳು ಟೆಂಪಲ್​ ಕಾರಿಡಾರ್​ ಕುರಿತು ಚರ್ಚೆಯಾಗಲೆಂದು ಆಶಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪಿ.ನಟರಾಜ್​ ಪ್ರಭು, ಜಂಟಿ ಕಾರ್ಯದರ್ಶಿ ಅನೀಶ್​ ಪೈ, ಎಸಿಸಿಇಎ ಉಡುಪಿ ಅಧ್ಯಕ್ಷ ಭಗವಾನ್​ ದಾಸ್​, ಎಸಿಸಿಇಎ ಉಡುಪಿ ಜಂಟಿ ಕಾರ್ಯದರ್ಶಿ ನಿರಂಜನ್​ ಕುಮಾರ್​, ಮಾಜಿ ಅಧ್ಯಕ್ಷ ಯೋಗೇಶ್ಚಂದ್ರ ದಾರ, ಜಿಲ್ಲಾ ಬೇಕರ್ಸ್​ ಅಸೋಸಿಯೇಷನ್​ನ ಕಾರ್ಯದರ್ಶಿ ಸತ್ಯಪ್ರಸಾದ್​ ಶೆಣೈ ಇದ್ದರು.

ರಾಜಕೀಯ ಚರ್ಚೆಗಿಲ್ಲ ಅವಕಾಶ

ಸಂಸ್ಥೆಯ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್​ ನಾಯಕ್​ ಮಾತನಾಡಿ, ಈ ಸಭೆಯಲ್ಲಿ ರಾಜಕೀಯ ಚರ್ಚೆಗೆ ಅವಕಾಶವಿಲ್ಲ. ನಮ್ಮ ಪಕ್ಷ ಹೀಗೆ ಮಾಡಿದೆ, ಆ ಪಕ್ಷ ಹೀಗೆ ಮಾಡಿಲ್ಲ ಎಂದು ಆರೋಪ-ಪ್ರತ್ಯಾರೋಪ ಮಾಡುವ ಸಭೆಯಲ್ಲ. ಸಭೆಯಲ್ಲಿ ಪಾಲ್ಗೊಂಡಿರುವ ರಾಜಕೀಯ ನಾಯಕರುಗಳಿಗೆ ಜಿಲ್ಲೆಯಲ್ಲಿ ಸ್ಥಗಿತವಾಗಿರುವ ಅಭಿವೃದ್ಧಿ ಯೋಜನೆ ಅಥವಾ ಮುಂದೆ ಮಾಡಲಿಕ್ಕಿರುವ ಅಭಿವೃದ್ಧಿ ಯೋಜನೆಗಳ ಮಾಹಿತಿ ಲಭ್ಯವಾಗಲಿದೆ. ಅದರಿಂದ ಸರ್ಕಾರದ ಮಟ್ಟದಲ್ಲಿ ಕೆಲಸ ನಿರ್ವಹಿಸಲು ಅವರಿಗೆ ಈ ಸಭೆಯಿಂದ ಅನುಕೂಲ ಆಗಲಿದೆ. ಇದು ಐದು ವರ್ಷದಿಂದ ಮುಂದಿನ ಐದು ವರ್ಷಕ್ಕೆ ಆಗಬಹುದಾದ ಅಭಿವೃದ್ಧಿಪರ ಕಾರ್ಯಕ್ಕೆ ಸಂಬಂಧಿಸಿದ ಸಭೆಯಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net