ಕಾಸರಗೋಡು: ಬೇಕಲಕೋಟೆ ಸನಿಹ ಪಳ್ಳಿಕೆರೆ ಬೀಚ್ ಬಳಿ ಸಮುದ್ರದಲ್ಲಿ ಸ್ನಾನಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ನೀರಿನ ಅಲೆಗೆ ಸಿಲುಕಿ ಸಮುದ್ರಪಾಲಾಗಿದ್ದಾರೆ. ಜತೆಗಿದ್ದ ಇಬ್ಬರು ಈಜಿ ದಡ ಸೇರಿದ್ದಾರೆ.
ಕೊಟ್ಟಾಯಂ ಚಂಗನಶ್ಯೇರಿ ನಿವಾಸಿಗಳಾದ ಅಂಕಿತ್(20) ಹಾಗೂ ಅಪ್ಪು ಟಿ.ಅಬ್ರಹಾಂ(20) ನೀರುಪಾಲಾದವರು. ನಾಲ್ವರು ವಿದ್ಯಾರ್ಥಿಗಳ ತಂಡ ಬೇಕಲಕೋಟೆ ವೀಕ್ಷಣೆಗೆ ಆಗಮಿಸಿದ್ದು, ಸಂಜೆ 6.30ರ ವೇಳೆಗೆ ಬೇಕಲಕೋಟೆಯಿಂದ ಅನತಿ ದೂರದಲ್ಲಿರುವ ಪಳ್ಳಿಕೆರೆ ಬೀಚ್‌ಗೆ ತೆರಳಿದ್ದಾರೆ.
ಅಲ್ಲಿ ಸಮುದ್ರದಲ್ಲಿ ಸ್ನಾನಕ್ಕಿಳಿದಿದ್ದು, ಬಿರುಸಿನ ಅಲೆಗೆ ಸಿಲುಕಿ ನೀರುಪಾಲಾಗಿದ್ದಾರೆ. ಬೇಕಲ ಠಾಣೆ ಪೊಲೀಸರು, ಸ್ಥಳೀಯ ನಿವಾಸಿಗಳು ನೀರುಪಾಲಾದ ವಿದ್ಯಾರ್ಥಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.