ತಂಡದಿಂದ ಇಬ್ಬರಿಗೆ ಹಲ್ಲೆ

Crime
Crime
Published on

ಉಪ್ಪಿನಂಗಡಿ

: ತನ್ನನ್ನು ಮನೆಗೆ ಸುರಕ್ಷಿತವಾಗಿ ಬಿಡಲು ಬಂದವರ ಮೇಲೆ ಹಲ್ಲೆ ನಡೆಸಿ, ಆಕ್ಷೇಪಿಸಿದ್ದಕ್ಕೆ ತನಗೆ ಹಾಗೂ ತಂಗಿಗೆ ಅವ್ಯಾಚ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಯುವತಿಯೊಬ್ಬರು ನೀಡಿದ ದೂರಿನಂತೆ 9 ಮಂದಿ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಆರೋಪಿಗಳಾದ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿಗಳಾದ ಜಾಬಿರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಶ್ರಫ್, ಅಶ್ರಫ್ ಕೋಲ್ಪೆ ಎಂಬುವರ ವಿರುದ್ಧ ಫಾಯಿಝಾ ದೂರು ನೀಡಿದ್ದಾರೆ.
ಮೆಲ್ಕಾರ್‌ನಲ್ಲಿ ಝಾಹಿರ್ ಎಂಬುವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆ.12ರಂದು ರಾತ್ರಿ ಕೆಲಸ ಮುಗಿಸಿ ಅಂಗಡಿ ಮಾಲೀಕ ಅವರ ತಾಯಿಯ ಜತೆಗೂಡಿ ನನ್ನನ್ನು ಮನೆಗೆ ಬಿಟ್ಟು ಹಿಂತಿರುಗುವ ವೇಳೆ ಕೊಣಾಲು ಗ್ರಾಮದ ಕೋಲ್ಪೆಯಲ್ಲಿ ರಾತ್ರಿ ತಂಡವೊಂದು ಅಕ್ರಮವಾಗಿ ತಡೆದು ಬೈಯುತ್ತಿದ್ದರು. ಇದನ್ನು ಆಕ್ಷೇಪಿಸಿದಾಗ ತನ್ನ ಮೇಲೂ ಹಲ್ಲೆ ನಡೆಸಿದ್ದು, ರಕ್ಷಣೆಗೆ ಬಂದ ತನ್ನ ತಂಗಿಯ ಮೇಲೂ ಹಲ್ಲೆ ನಡೆಸಿದ್ದಾರೆಂದೂ ದೂರಲಾಗಿದೆ. ಫಾಯಿಝಾ ಹಾಗೂ ಆಕೆಯ ತಂಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net