_1776078376282.webp?w=480&auto=format%2Ccompress&fit=max)
_1776078376282.webp?w=480&auto=format%2Ccompress&fit=max)
ಕಾಸರಗೋಡು: ಅಬುಧಾಬಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಸರಗೋಡು ನಿವಾಸಿ ಸೇರಿದಂತೆ ಇಬ್ಬರು ಮಲಯಾಳಿಗರು ದಾರುಣವಾಗಿ ಮೃತಪಟ್ಟಿದ್ದಾರೆ. ಮೂಲತ: ಕುಂಬಳೆ ನಿವಾಸಿ, ಕಾಸರಗೋಡಿನ ಬೇಕಲ್‌ನ ಮವ್ವಲ್‌ನ ಅಶ್ರಫ್(54) ಮತ್ತು ಮಲಪ್ಪುರಂನ ತ್ರಿಪ್ಪನಾಚಿಯ ನಾರನಾಥ್ ಹಂಸಾ ಕೊಕಂಚೇರಿ(53) ಮೃತರು.
ಇವರಿಬ್ಬರೂ ಶಾರ್ಜಾದಿಂದ ಅಬುಧಾಬಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ಭಾನುವಾರ ರಾತ್ರಿ ಅಬುಧಾಬಿಯ ಶಹಾಮಾದಲ್ಲಿ ಅಪಘಾತ ಸಂಭವಿಸಿದೆ.
ಮೃತದೇಹಗಳನ್ನು ಅಬುಧಾಬಿಯ ಮಫ್ರಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೊಹಮ್ಮದ್ ಅಶ್ರಫ್ ಹಲವು ವರ್ಷಗಳಿಂದ ಯುಎಇಯಲ್ಲಿ ನೆಲೆಸಿದ್ದರೆ, ನಾರನಾಥ್ ಹಂಸಾ ವಿಸಿಟಿಂಗ್ ವೀಸಾ ಮೂಲಕ ಅಬುಧಾಬಿಗೆ ತೆರಳಿದ್ದರು.