

ಮೂಲ್ಕಿ: ಕೋಲ್ನಾಡು ಕಿರು ಸೇತುವೆ ಬಳಿ ಬಸ್, ಟ್ಯಾಂಕರ್, ಟೆಂಪೋ ನಡುವೆ ಸರಣಿ ಅಪಘಾತ ನಡೆದಿದ್ದು, ಬಸ್ಸಿನಲ್ಲಿದ್ದ ಮಗು ಸೇರಿ ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋಲ್ನಾಡು ಕಿರು ಸೇತುವೆ ಬಳಿ ಏಕಾಏಕಿ ನಿಲ್ಲಿಸಿದ ಶಾಲಾ ವಾಹನದ ಜೊತೆ ಅಪಘಾತ ತಪ್ಪಿಸಲು ಲಿಂಗಪ್ಪಯ್ಯ ಕಾಡಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟೆಂಪೋ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಟ್ಯಾಂಕರ್ ಲಾರಿ ಚಾಲಕ ಕೂಡ ನಿಧಾನ ಮಾಡಿದ್ದು, ಅದರ ಹಿಂದಿನಿಂದ ಮಂಗಳೂರು ಕಡೆಗೆ ತಡೆರಹಿತ ಬಸ್ಸಿನ ಚಾಲಕ ಬಸ್ಸನ್ನು ನಿಯಂತ್ರಿಸಲಾಗದೆ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಈ ಸಂದರ್ಭ ಟ್ಯಾಂಕರ್ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡು ಎದುರು ಭಾಗದಲ್ಲಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದೆ.