ರಸ್ತೆ ಬದಿ ತ್ಯಾಜ್ಯ ಎಸೆದ ಇಬ್ಬರಿಗೆ ದಂಡ

 ಕಿಲೆಂಜಾರು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದ ಸ್ಥಳಕ್ಕೆ ಕುಪ್ಪೆಪದವು ಪಿಡಿಒ ಭೇಟಿ ನೀಡಿದರು.
ಕಿಲೆಂಜಾರು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದ ಸ್ಥಳಕ್ಕೆ ಕುಪ್ಪೆಪದವು ಪಿಡಿಒ ಭೇಟಿ ನೀಡಿದರು.
Published on
ಗುರುಪುರ: ಕುಪ್ಪೆಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜಾರು ಎಂಬಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಸುಟ್ಟು ಹಾಕಿದ ಮತ್ತು ರಸ್ತೆ ಬದಿಗೆ ಕೋಳಿ ತ್ಯಾಜ್ಯ ಸುರಿದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮ್ಯಾ ಕ್ರಮವಾಗಿ 2500 ರೂ. ಮತ್ತು 5000 ರೂ. ದಂಡ ವಿಧಿಸಿದ್ದಾರೆ.
ಕೋಳಿ ತ್ಯಾಜ್ಯ ಎಸೆದಿರುವ ಕಿಲೆಂಜಾರುವಿನ ಸಿಪ್ರಿಯನ್ ಎಂಬುವರಿಗೆ 5,000 ರೂ.ಹಾಗೂ ರಸ್ತೆ ಬದಿಯಲ್ಲಿ ಅಂಗಡಿ ಕಸ ಸುಟ್ಟು ಹಾಕಿರುವ ಶಶಿ ಕುಮಾರ್ ಅವರಿಗರ 2500 ರೂ. ದಂಡ ವಿಧಿಸಲಾಗಿದೆ. ಸೆ.5ರಂದು ಜಿಲ್ಲಾ ಸ್ವಚ್ಛ ಭಾರತ್ ಮಿಷನ್(ಗ್ರಾ) ಇದರ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಮಾಲೋಚಕರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ತೆರಳಿ ಖುದ್ದಾಗಿ ಪರಿಶೀಲನೆ ನಡೆಸಿದರು.
ರಸ್ತೆ ಬದಿ, ಚರಂಡಿಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದೆ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ಮತ್ತು ಪಂಚಾಯಿತಿ ವಾಹನಗಳಿಗೆ ತ್ಯಾಜ್ಯ ನೀಡಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net