ತಾಸುಗಳ ಅಂತರದಲ್ಲಿ ಸಹೋದರರಿಬ್ಬರ ಸಾವು

ರಾಮಕೃಷ್ಣ ಭಟ್, ಕೇಶವಭಟ್
ರಾಮಕೃಷ್ಣ ಭಟ್, ಕೇಶವಭಟ್
Published on
ಕಾಸರಗೋಡು: ಕುಂಬ್ಡಾಜೆ ಪಂಚಾಯಿತಿ ಉಬ್ರಂಗಳದಲ್ಲಿ ಸಹೋದರರಿಬ್ಬರು ಒಂದೇ ದಿನ ಸಾವಿಗೀಡಾಗಿದ್ದಾರೆ. ಉಬ್ರಂಗಳ ನಿವಾಸಿ ರಾಮಕೃಷ್ಣ ಭಟ್(70) ಹಾಗೂ ಅವರ ಸಹೋದರ ಕೇಶವ ಭಟ್(65) ತಾಸುಗಳ ಅಂತರದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಭಾನುವಾರ ಸಂಜೆ ರಾಮಕೃಷ್ಣ ಭಟ್ ಅವರು ಜಾನುವಾರುಗಳಿಗೆ ನೀರು ನೀಡಲು ಹಟ್ಟಿಗೆ ತೆರಳಿದ್ದ ಸಂದರ್ಭ ಅವರ ಸಹೋದರ ಕೇಶವ ಭಟ್ ಮನೆಯಲ್ಲಿ ಪೂಜೆಯಲ್ಲಿ ತೊಡಗಿದ್ದರು. ಪೂಜೆ ಮುಗಿಸಿ ಹೊರಬಂದ ಕೇಶವ ಭಟ್ ಅವರು ಹಟ್ಟಿಯ ಸಮೀಪ ಸಹೋದರ ರಾಮಕೃಷ್ಣ ಭಟ್ ಕುಸಿದು ಬಿದ್ದಿರುವುದನ್ನು ಗಮನಿಸಿದರು. ಇವರು ನೀಡಿದ ಮಾಹಿತಿಯನ್ವಯ ಸ್ಥಳೀಯರ ನೆರವಿನಿಂದ ರಾಮಕೃಷ್ಣ ಭಟ್ ಅವರನ್ನು ಮುಳ್ಳೇರಿಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ರಾಮಕೃಷ್ಣ ಭಟ್ ಸಾವಿಗೀಡಾಗಿ ತಾಸುಗಳೊಳಗೆ ಕೇಶವ ಭಟ್ ಅವರು ಮನೆಯಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಸಹೋದರರಿಬ್ಬರ ನಿಧನದ ಸುದ್ದಿ ಕುಟುಂಬ ಹಾಗೂ ಉಬ್ರಂಗಳ ಪರಿಸರದಲ್ಲಿ ಆಘಾತ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net