ಮದ್ಯದ ಅಮಲಿನಲ್ಲಿ ಗಲಾಟೆ, ಇಬ್ಬರ ಬಂಧನ

ಬಂಧನ
ಬಂಧನ
Published on
ಉಪ್ಪಳ: ಮದ್ಯದ ಅಮಲಿನಲ್ಲಿ ಗಲಾಟೆ ನಡೆಸಿದ ಬಾಯಾರುಪದವು ಕ್ಯಾಂಪ್ಕೊ ಸಮೀಪದ ಫಯಾಸ್ (33), ರಾಜಸ್ಥಾನ ಮೂಲದ ಶ್ರೀ ಓಂ ಮೀನ (26) ಎಂಬಿಬ್ಬರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಸಂಜೆ 6 ಗಂಟೆಗೆ ಈ ಇಬ್ಬರು ಬಾಯಾರು ಆವಳದಲ್ಲಿ ಮದ್ಯ ಸೇವಿಸಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದು ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಫಯಾಸ್ ಹಾಗೂ ಶ್ರೀ ಓಂ ಮೀನನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಬಂಧಿತರ ಪೈಕಿ ಫಯಾಸ್ 2020ರಲ್ಲಿ ಬದಿಯಡ್ಕ ಠಾಣೆಯಲ್ಲಿ ದಾಖಲಾಗಿರುವ ಗಾಂಜಾ ವಶ ಪ್ರಕರಣದಲ್ಲಿ ವಾರೆಂಟ್ ಆರೋಪಿಯಾಗಿದ್ದಾನೆಂದು ತಿಳಿದುಬಂದಿದೆ. ಅದರಂತೆ ಆತನನ್ನು ಬದಿಯಡ್ಕ ಠಾಣೆಗೆ ರವಾನಿಸಲಾಗಿದೆ. ಶ್ರೀ ಓಂ ಮೀನಾನನ್ನು ಜಾಮೀನಿನ ಮೇಲೆ ಬಿಡುಡೆಗೆ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net