ಜಾನುವಾರು ಅಕ್ರಮ ಸಾಗಾಟ, ಇಬ್ಬರ ಬಂಧನ

Arrest
Arrest
Published on
ಮೂಲ್ಕಿ: ಉತ್ತರ ಕರ್ನಾಟಕದ ಹಾವೇರಿಯಿಂದ ಕೇರಳದ ಕಾಸರಗೋಡು ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಮೂಲ್ಕಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಸಮೀಪದ ಬಪ್ಪನಾಡು ದ್ವಾರದ ಬಳಿ ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಾವೇರಿ ನಿವಾಸಿಗಳಾದ ಚಾಲಕ ಮಹಾಂತೇಶ್(26), ನಿರ್ವಾಹಕ ರಾಜು(26) ಬಂಧಿತರು. ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಚೆಕ್ ಪಾಯಿಂಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ವಾಹನದಲ್ಲಿ 16 ಜಾನುವಾರು(13 ಕೋಣ, 1 ಎಮ್ಮೆ, 1 ಹಸು, 1 ಹೋರಿ)ಗಳನ್ನು ಪರವಾನಗಿ ಇಲ್ಲದೆ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರು ವಾಹನವನ್ನು ಮುಟ್ಟುಗೋಲು ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net