ಸರ ಎಗರಿಸಿದ್ದ ಇಬ್ಬರು ಆರೋಪಿಗಳು ಸೆರೆ

Arrest
Arrest
Published on
ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ದೂಡಿ ಆಕೆ ಕತ್ತಿನಿಂದ ಮೂರು ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಇಬ್ಬರು ಆರೋಪಿಗಳನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಯಿಲಾಂಡಿ ಮಾವಿಲೆಕಂಡಿ ಹೌಸ್‌ನ ಸೂರ್ಯನ್ (26) ಹಾಗೂ ತಾಮರಶ್ಶೇರಿ ನಿವಾಸಿ ಅನಸ್ ಯಾನೆ ರಂಬುಟನ್ ಅನಸ್ (29) ಬಂಧಿತರು.
ಇದೇ ಆರೋಪಿಗಳು ಕಣ್ಣೂರು ಮಟ್ಟನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಸರ ಕಳವು ಕೃತ್ಯದಲ್ಲಿ ಶಾಮೀಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಟ್ಟನ್ನೂರು ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾಗ ಹೊಸದುರ್ಗ ಠಾಣೆ ವ್ಯಾಪ್ತಿಯ ಯುವತಿಯ ಕತ್ತಿನಿಂದ ಚಿನ್ನದ ಸರ ಎಗರಿಸಿದ ವಿಷಯ ಬೆಳಕಿಗೆ ಬಂದಿತ್ತು. ಹೊಸದುರ್ಗ ಪೊಲೀಸರು ಮಟ್ಟನ್ನೂರಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net