ತುಳಸಿ ಸಂಕೀರ್ತನೆ ನೃತ್ಯ ಪ್ರಕಾರ

ಪಡುಬಿದ್ರಿ ತರಂಗಿಣಿ ಮಿತ್ರಮಂಡಳಿ ಸದಸ್ಯರಿಂದ ತುಳಸೀ ಸಂಕೀರ್ತನೆ
ಪಡುಬಿದ್ರಿ ತರಂಗಿಣಿ ಮಿತ್ರಮಂಡಳಿ ಸದಸ್ಯರಿಂದ ತುಳಸೀ ಸಂಕೀರ್ತನೆ
Published on
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕೈಯಲ್ಲಿ ತಾಳ, ಕಾಲ ಹೆಜ್ಜೆಯ ಕ್ರಮಬದ್ಧ ಸಂವಹನದೊಂದಿಗೆ ವಾದಿರಾಜರು ಬರೆದ ದೇವರ ನಾಮ ಸಂಕೀರ್ತನೆಗಳನ್ನು ಬಾಯಲ್ಲಿ ಪಠಿಸುತ್ತಾ ತುಳಸಿ ಕಟ್ಟೆಗೆ ಪ್ರದಕ್ಷಿಣೆಗಳನ್ನು ಹಾಕುವ ಅತಿ ವಿರಳವಾಗಿರುವ ತುಳಸಿ ಸಂಕೀರ್ತನೆ ನೃತ್ಯ ಪ್ರಕಾರ ಪ್ರಸಕ್ತ ಪರಂಪರೆಯಲ್ಲಿಯೂ ಮುಂದುವರೆಸುವ ಕಾರ್ಯ ಪಡುಬಿದ್ರಿ ಬ್ರಾಹ್ಮಣ ಮನೆತನದ ಯುವಕರಿಂದ ಯಶಸ್ವಿಯಾಗಿ ಸಾಗುತ್ತಿದೆ.
ಮಠದ ಸಂಪ್ರದಾಯಕ್ಕೂ ಪಡುಬಿದ್ರಿಯ ಬ್ರಾಹ್ಮಣ್ಯಕ್ಕೂ ಹಿಂದಿನ ಕಾಲದಿಂದಲೂ ಅವಿನಾಭಾವ ಸಂಬಂಧ. ಉತ್ತಮ ಸಂಟಿತ ಬ್ರಾಹ್ಮಣ ಸಮುದಾಯ ಹೊಂದಿದ ಪಡುಬಿದ್ರಿ ಗ್ರಾಮ ಆಯಾ ಕಾಲಕ್ಕೆ ತಕ್ಕಂತೆ ಯುವ ಭಜಕರ ವೃಂದವನ್ನೂ ಬೆಳೆಸಿತ್ತು. ಪ್ರಖ್ಯಾತ ಮನೆತನಗಳಾದ ಪತ್ತಪ್ಪ ಬೈಲಮನೆತನ, ವಾಮನ ಮನೆತನ, ಬಾಲಪ್ಪ ಮನೆತನ ಮುಂತಾದ ಮನೆತನಗಳ ಯುವ ಸದಸ್ಯರು ದೀಪಾವಳಿಯಿಂದ ಪ್ರಾರಂಭವಾಗಿ ಕಾರ್ತಿಕ ವಾಸದಲ್ಲಿ ತುಳಸಿ ಪೂಜೆಯೊಂದಿಗೆ ನಡೆಸಲಾಗುವ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಧ್ಯದ ಕಾಲಟ್ಟದಲ್ಲಿ ಪತ್ತನಂಕ ಮನೆತನದ ದಿ.ಬಾಜಿರಾವ್ ಅವರಿಂದ ದಿ.ಹರಿಕೃಷ್ಣ ಶರ್ಮ ಅವರು ಮುಂದುವರಿಸಿ ಪ್ರಸ್ತುತ ಬಾಲಪ್ಪ ಸುಧಾಕರ ರಾವ್ ಅವರ ವಾರ್ಗದರ್ಶನದಲ್ಲಿ ಅವರ ಶಿಷ್ಯ ಚಂದ್ರಶೇಖರ ರಾವ್, ಅಧ್ಯಕ್ಷ ರವಾಕಾಂತ ರಾವ್, ಕಾರ್ಯದರ್ಶಿ ಗಣೇಶ ರಾವ್ ವೈ.ಎಸ್., ಕೋಶಾಧಿಕಾರಿ ಗೋವಿಂದ ರಾವ್, ಗೌರವಾಧ್ಯಕ್ಷ ಸದಾಶಿವ ಆಚಾರ್, ಶ್ರೀಧರ ಆಚಾರ್, ಮುರುಡಿ ಹರಿಕೃಷ್ಣ ರಾವ್, ಆಕಾಲಿ ಸುರೇಶ ರಾವ್, ಬಾಲಪ್ಪ ವಾಸುದೇವ ರಾವ್, ನಾಣ್ಯಯ್ಯ ರುಪತಿ ರಾವ್, ಶ್ರೀಪತಿ ರಾವ್, ಅಮರೇಂದ್ರ ಆಚಾರ್, ರಾವೇಂದ್ರ ಪಿ.ಕೆ, ಶ್ರೀನಿವಾಸ ಭಾಗವತ, ಶೈಲೇಂದ್ರ ಉಪಾಧ್ಯಾಯ, ಪ್ರಶಾಂತ ಉಪಾಧ್ಯಾಯ, ಹರಿಪ್ರಸಾದ್, ವಾಮನ ರುಪತಿ ರಾವ್, ಲಕ್ಷ್ಮೀಕಾಂತ ರಾವ್, ರಾಧಾಕೃಷ್ಣ ಆಚಾರ್, ನಾಗರಾಜ ರಾವ್, ಗಣೇಶ್ ರಾವ್ ಪಿ.ಎಂ. ಸೇರಿದಂತೆ 50 ಸದಸ್ಯರ ತರಂಗಿಣಿ ಮಿತ್ರಮಂಡಳಿ ಸಂಕೀರ್ತನಾ ತಂಡ ಈ ಕಲೆಯನ್ನು 36 ವರ್ಷಗಳಿಂದ ನಾಡಿನಾದ್ಯಂತ ಪಸರಿಸಿ ತುಳಸಿ ಮೂಲದಲ್ಲಿರಬಹುದಾದ ಎಲ್ಲ ದೇವತೆಗಳನ್ನು ನಮ್ಮೊಳಗಿರಬಹುದಾದ ತತ್ವ ಹಾಗೂ ವಾತೃಕಾ ದೇವತೆಗಳೊಂದಿಗೆ ಸಮೀಕರಣಗೊಳಿಸುವ ಕಾರ್ಯ ವಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಗುರು ವಾದಿರಾಜರು ರಚಿಸಿದ ಕ್ಲಿಷ್ಟ ರಾಗ ತಾಳಗಳೊಂದಿಗಿನ ಸಂಕೀರ್ತನೆಗಳನ್ನು ಹಾಡುತ್ತಾ ಹೆಜ್ಜೆ ಹಾಕುತ್ತಾ ಮನೆಮನೆಗಳಲ್ಲಿ ಭಜಿಸಲು ಲಕ್ಷ್ಮೀ ಸಾನ್ನಿಧ್ಯ ಅನುಗ್ರಹವಾಗುವುದೆಂದು ನಂಬಿಕೆಯೊಂದಿಗೆ ಇಂದಿಗೂ ಈ ಪರಂಪರೆಯನ್ನು ತುಳುನಾಡ ಬ್ರಾಹ್ಮಣ ಸಮುದಾಯವು ಉಳಿಸಿ ಬೆಳೆಸಿಕೊಂಡು ಬರುತ್ತಿದೆ.

ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೆ ಚಾತುರ್ವಾಸ್ಯ ಶಯನ ಪೂರೈಸಿದ ದೇವರಿಗೆ ಮರುದಿನ ದ್ವಾದಶಿಯಂದು ಉತ್ತಾನೋತ್ಸವ ಅಥವಾ ಪ್ರಬೋದೋತ್ಸವ. ಆದ್ದರಿಂದ ಈ ಕಾರ್ತಿಕ ವಾಸದಲ್ಲಿ ತುಳಸಿ ಬುಡದಲ್ಲಿ ರಾಧಾ ದಾಮೋದರರನ್ನು ಸಂಕಲ್ಪಿಸಿ ದೀಪ ಬೆಳಗಿಸಿ, ಪ್ರದಕ್ಷಿಣಿ ಸಂಕೀರ್ತನೆ ವಾಡಿ ಪೂಜಿಸುವುದು ಮಹಾ ಪುಣ್ಯಪ್ರದವೆಂದು ಶಾಸ್ತ್ರ ಹಾಗೂ ತುಳುನಾಡ ಪದ್ಧತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net