ಧರ್ಮದ ಅಂತರಾಳದಲ್ಲಿ ನೈಜ ಸುಖ ಅಡಕ

ಗೋಳಿಹೊಳೆಯಲ್ಲಿ ಚಾತುರ್ವಾಸ್ಯ ವ್ರತಾಚರಣೆ ಪೂರ್ವಭಾವಿ ಸಭೆಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿದರು. ಪ್ರಮುಖರಾದ ಮಂಕಾಳ ವೈದ್ಯ, ವಿ.ಸುನೀಲ್ ಕುವಾರ್, ಯಶಪಾಲ್ ಸುವರ್ಣ ಮೊದಲಾದವರಿದ್ದರು.
ಗೋಳಿಹೊಳೆಯಲ್ಲಿ ಚಾತುರ್ವಾಸ್ಯ ವ್ರತಾಚರಣೆ ಪೂರ್ವಭಾವಿ ಸಭೆಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿದರು. ಪ್ರಮುಖರಾದ ಮಂಕಾಳ ವೈದ್ಯ, ವಿ.ಸುನೀಲ್ ಕುವಾರ್, ಯಶಪಾಲ್ ಸುವರ್ಣ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ಮನುಷ್ಯ ಪಂಚೇಂದ್ರಿಯಗಳಲ್ಲಿ ವಾತ್ರ ಸುಖವಿದೆ ಎಂದು ತಿಳಿದಿದ್ದಾನೆ. ನಿಜವಾಗಿಯೂ ಸುಖವಿರುವುದು ಧರ್ಮದ ಅಂತರಾಳದಲ್ಲಿ. ಚಾತುರ್ವಾಸ್ಯ ವ್ರತಾಚರಣೆ ಅತ್ಯಂತ ಪುಣ್ಯದ ಕಾರ್ಯ, ಈ ಸಂದಭರ್ ಸತ್ಸಂಗ, ಭಜನೆ, ಪ್ರವಚನ, ಭಾಗವತಗಳು ನಡೆಯುತ್ತಿರುವುದರಿಂದ ಇದು ಧರ್ಮ ಜಾಗೃತಿಗೆ ಅದ್ಭುತ ಪರ್ವಕಾಲವಾಗಿದೆ ಎಂದು ಧರ್ಮಸ್ಥಳ ವಿದ್ಯಾನಗರ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಹೇಳಿದರು.
ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇಗುಲದಲ್ಲಿ ಜು.28ರಿಂದ 48 ದಿನಗಳ ಕಾಲ ನಡೆಯಲಿರುವ ಚಾತುರ್ಮಾಸ್ಯ ವ್ರತಾಚರಣೆ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮೀನುಗಾರಿಕಾ ಹಾಗೂ ಬಂದರು ಇಲಾಖೆ ಸಚಿವ ಮಂಕಾಳ ವೈದ್ಯ, ಕಾರ್ಕಳ ಶಾಸಕ ವಿ.ಸುನೀಲ್ ಕುವಾರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ವಾಜಿ ಸಚಿವ ಶಿವಾನಂದ ನಾಯ್ಕ, ಉತ್ತರ ಕನ್ನಡ ಜೆಡಿಎಸ್ ಅಧ್ಯಕ್ಷ ಸೂರಜ್ ನಾಯ್ಕ, ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇಗುಲದ ಅರ್ಚಕ ವಾಸುದೇವ ಹೊಳ್ಳ, ಕುಂದಾಪುರ ತಾಲೂಕು ಬಿಲ್ಲವ ಸಂದ ಅಧ್ಯಕ್ಷ ಅಶೋಕ್ ಪೂಜಾರಿ, ಬೈಂದೂರು ತಾಲೂಕು ಬಿಲ್ಲವ ಸಂದ ಅಧ್ಯಕ್ಷ ಗಣೇಶ ಎಲ್.ಪೂಜಾರಿ, ಮುಖಂಡರಾದ ಉದಯ ಗೌಡ, ನರಸಿಂಹ ಪೂಜಾರಿ, ಶಂಕರ ಪೂಜಾರಿ, ಎಚ್.ಆರ್.ನಾಯ್ಕ, ಟಿ.ಟಿ.ನಾಯ್ಕ, ಸುಬ್ರಾಯ ನಾಯ್ಕ, ಎಸ್.ಕೆ.ನಾಯ್ಕ, ಸುಂದರ ನಾಯ್ಕ, ಈಶ್ವರ ನಾಯ್ಕ ಮತ್ತಿತರರಿದ್ದರು.
ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇಗುಲದ ಆಡಳಿತ ಮೊಕ್ತೇಸರ ಶಿವರಾಜ್ ಪೂಜಾರಿ ಸ್ವಾಗತಿಸಿದರು. ಶಾಸಕ ಗುರುರಾಜ ಗಂಟಿಹೊಳೆ ಪ್ರಸ್ತಾವಿಸಿದರು. ರವಿ ಮಡಿವಾಳ ನಿರೂಪಿಸಿದರು. ಸಂತೋಷ ಪೂಜಾರಿ ವಂದಿಸಿದರು.

ಹಿಂದೆ ರಾಜ ಮಹಾರಾಜರು ರಾಜ್ಯದ ಸುಭಿಕ್ಷೆಗಾಗಿ ಚಾತರ್ವಾಸ್ಯ ವ್ರತಾಚರಣೆ ನಡೆಸುತ್ತಿದ್ದರು. ಇಂದು ರಾಜ್ಯದ ಸುಭಿಕ್ಷೆ ಹಾಗೂ ಸಂಸ್ಕಾರಯುತ ಸವಾಜಕ್ಕಾಗಿ ಚಾತುರ್ವಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆ. ಸನಾತನ ಹಿಂದೂ ಧರ್ಮದ ಕೇಂದ್ರವು ಮಠ, ಮಂದಿರವಾಗಿದ್ದು ಸಂಸ್ಕಾರಯುತ ಸವಾಜದ ನಿರ್ವಾಣದಲ್ಲಿ ಇವುಗಳ ಪಾತ್ರ ಮಹತ್ವದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net