ಲಾರಿಗಳ ಬ್ಯಾಟರಿ ಕಳವು, ಮತ್ತೊಬ್ಬನ ಬಂಧನ

arrest
arrest
Published on
ಕಾಸರಗೋಡು: ಗ್ಯಾರೇಜ್ ಹಾಗೂ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಬಂಧಿಸಿದ್ದ ಅಬ್ದುಲ್ ಮಜೀದ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಕುಂಬಳೆ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕುಂಬಳೆ ಆಸುಪಾಸು ಲಾರಿಗಳಿಂದ ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆಲಂಪಾಡಿ ತೈವಳಪ್ಪಿನ ಶಮೀರ್(50) ಎಂಬಾತನನ್ನು ಕುಂಬಳೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ಈತ ನೀಡಿದ ಮಾಹಿತಿಯನ್ವಯ ಈತನ ಸಹಚರನಾದ ಅಬ್ದುಲ್ ಮಜೀದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಂಗೋಳಿ, ನಾಯ್ಕಪು, ನಾರಾಯಣಮಂಗಲ, ಭಾಸ್ಕರನಗರ, ಪೆರುವಾಡ್‌ನಲ್ಲಿ ನಡೆದ ಬ್ಯಾಟರಿ ಕಳವು ಕುರಿತು ತನಿಖೆ ನಡೆಯುತ್ತಿರುವ ಮಧ್ಯೆ ಈ ಬಂಧನ ನಡೆದಿದೆ. ಪ್ರಕರಣದಲ್ಲಿ ಫವಾಸ್, ಫಾರೂಕ್ ಎಂಬವರೂ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net