ಬಂಟಕಲ್ಲು ರೋಟರಿ ಸಭಾಭವನದಲ್ಲಿ ಪಂಜಿಮಾರು ಮುಲ್ಕಾಡಿ ಗಣಪತಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
Published on:
Copied
Follow Us
ಶಿರ್ವ: ಅಂತಾರಾಷ್ಟ್ರೀಯ ರೋಟರಿ ವೃತ್ತಿ ಸೇವಾ ಮಾಸಾಚರಣೆ ಅಂಗವಾಗಿ ಶಿರ್ವ ರೋಟರಿ ವತಿಯಿಂದ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಶುಕ್ರವಾರ 45 ವರ್ಷಗಳಿಂದ ಕಾರ್ಪೆಂಟರ್ ವೃತ್ತಿಯಲ್ಲಿ ಸಹಾಯಕರಾಗಿ ಸೇವೆ ನೀಡುತ್ತಿರುವ ಪಂಜಿಮಾರು ಮುಲ್ಕಾಡಿ ಗಣಪತಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ವಿಲಿಯಮ್ ಮಚಾದೊ, ವಕೀಲ ಮೆಲ್ವಿನ್ ಡಿಸೋಜ, ವೃತ್ತಿ ಸೇವಾ ನಿರ್ದೇಶಕ ಮೈಕಲ್ ಮತಾಯಸ್ ಸನ್ಮಾನಿಸಿದರು. ವೃತ್ತಿ ಮಾಸಾಚರಣೆ ಬಗ್ಗೆ ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ.ಪುಂಡಲೀಕ ಮರಾಠೆ ವಾಹಿತಿ ನೀಡಿದರು.
ರೋಟರಿ ಮಾಜಿ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್ ಸನ್ಮಾನಿತರನ್ನು ಪರಿಚಯಿಸಿ, ಅಭಿನಂದಿಸಿದರು. ರೋಟರಿ ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ವಂದಿಸಿದರು. ಕ್ಲಬ್ ಸರ್ವೀಸ್ ನಿರ್ದೇಶಕ ಹೆರಾಲ್ಟ್ ಕುಟಿನ್ಹೋ, ಸಾರ್ಜಂಟ್ ಆಗಿ ರಿಚಾರ್ಡ್ ಫೆರಾವೊ ಸಹಕರಿಸಿದರು. ರೋಟರಿ ಸದಸ್ಯರು ಉಪಸ್ಥಿತರಿದ್ದರು.