ತುಳುನಾಡಿನ ವಿಶೇಷಚೇತನ ಸಾಧಕರಿಗೆ ಪ್ರೋತ್ಸಾಹ

ಬೆಂಗಳೂರಿನ ತುಳುವೆರೆ ಚಾವಡಿ (ರಿ.) ವತಿಯಿಂದ ಗಣೇಶ್​ ಪಂಜಿಮಾರು ಹಾಗೂ ಸುಮಾ ಪಂಜಿಮಾರು ಅವರನ್ನು ಸನ್ಮಾನಿಸಲಾಯಿತು. ವಿಶುಕುಮಾರ್​ ರೈ, ಪುರುಷೋತ್ತಮ ಚೇಂಡ್ಲಾ, ರಘುವೀರ್​ ನಾಯ್ಕ್​, ಆಶಾನಂದ ಕುಲಶೇಖರ, ಕೋಟಿ ಸುವರ್ಣ, ವಿಶ್ವನಾಥ್​ ಕುಲಾಲ್​, ಲೋಕೇಶ್​ ಇತರರಿದ್ದರು.
ಬೆಂಗಳೂರಿನ ತುಳುವೆರೆ ಚಾವಡಿ (ರಿ.) ವತಿಯಿಂದ ಗಣೇಶ್​ ಪಂಜಿಮಾರು ಹಾಗೂ ಸುಮಾ ಪಂಜಿಮಾರು ಅವರನ್ನು ಸನ್ಮಾನಿಸಲಾಯಿತು. ವಿಶುಕುಮಾರ್​ ರೈ, ಪುರುಷೋತ್ತಮ ಚೇಂಡ್ಲಾ, ರಘುವೀರ್​ ನಾಯ್ಕ್​, ಆಶಾನಂದ ಕುಲಶೇಖರ, ಕೋಟಿ ಸುವರ್ಣ, ವಿಶ್ವನಾಥ್​ ಕುಲಾಲ್​, ಲೋಕೇಶ್​ ಇತರರಿದ್ದರು.
Published on

* ಅಧ್ಯಕ್ಷ ವಿಶುಕುಮಾರ್​ ರೈ ಮಾಹಿತಿ

* ತುಳುವೆರೆ ಚಾವಡಿಯಿಂದ ಗಣೇಶ್​-ಸುಮಾರಿಗೆ ಸನ್ಮಾನ

ಉಡುಪಿ: ತುಳುವೆರೆ ಚಾವಡಿ (ರಿ.)ಯು ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ತುಳು ಮಾತನಾಡುವವರ ಸಂಘಟನೆಯಾಗಿದೆ. ತುಳುವರ ಕಲೆ, ಸಾಹಿತ್ಯ, ಸಾಂಸ್ಕೃತಿಕ ರಂಗದಲ್ಲಿ ಸಾಧನೆ ಮಾಡುತ್ತ ತುಳುನಾಡಿನಲ್ಲಿ ನೆಲೆಸಿರುವ ವಿಶೇಷಚೇತನರಿಗೆ ಪ್ರತಿವರ್ಷವೂ ಅವರ ಮನೆಗಳಿಗೇ ತೆರಳಿ ಸನ್ಮಾನ ಹಾಗೂ ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿಶುಕುಮಾರ್​ ರೈ ತಿಳಿಸಿದರು.
ತುಳುವೆರೆ ಚಾವಡಿ (ರಿ.) ಬೆಂಗಳೂರು ವತಿಯಿಂದ ಜು.26ರಂದು ರವೀಂದ್ರ ಕಲಾ ಕ್ಷೇತ್ರ ಬೆಂಗಳೂರಿನಲ್ಲಿ 'ತುಳುನಾಡ್ದ ಸಿರಿ ಬಿರ್ದ್​ ಮಾನಾದಿಗೆ ಪರ್ಬದ ಲೇಸ್​' 28ನೇ ವರ್ಷದ ಕಾರ್ಯಕ್ರಮದ ನಿಮಿತ್ತ ಶಿರ್ವದ ಪಂಜಿ ಮೊಗರಿನಲ್ಲಿರುವ ವಿಶೇಷಚೇತನ ಸಹೋದರ, ಸಹೋದರಿಯರಾದ ಗಣೇಶ್​ ಪಂಜಿಮಾರು ಹಾಗೂ ಸುಮಾ ಪಂಜಿಮಾರು ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಸಹಾಯಧನ ವಿತರಿಸಿ ಮಾತನಾಡಿದರು.
ಸಂಸ್ಥೆಯ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲಾ ಬೆಂಗಳೂರು, ಕಾರ್ಯದರ್ಶಿ ರಘುವೀರ್​ ನಾಯ್ಕ್​, ಮುಖ್ಯ ಸಲಹೆಗಾರ ಆಶಾನಂದ ಕುಲಶೇಖರ, ಸಂಘಟನಾ ಕಾರ್ಯದರ್ಶಿ ಕೋಟಿ ಸುವರ್ಣ, ಕೋಶಾಧಿಕಾರಿ ವಿಶ್ವನಾಥ್​ ಕುಲಾಲ್​, ಲೋಕೇಶ್​ ಹಾಗೂ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net