ಬೆಂಕಿ ತೀವ್ರವಾಗಿ ಹರಡುತ್ತಿರುವುದನ್ನು ಗಮನಿಸಿದ ಚರ್ಚ್ ಧರ್ಮಗುರುಗಳು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದರು. ಅಗಿಶಾಮಕ ದಳದವರಿಗಾಗಿ ಕಾಯದೆ ಕಾರ್ಯಪ್ರವೃತ್ತರಾದ ಸ್ಥಳೀಯರು, ಚರ್ಚ್ ಭಕ್ತರು ಒಟ್ಟಾಗಿ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಶಾಲೆ, ಚರ್ಚ್ ಪರಿಸರಕ್ಕೆ ಹರಡುತ್ತಿದ್ದ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.