ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ

 ಭಾರಿ ಗಾಳಿ, ಮಳೆಗೆ ಶಿಶಿಲ ಸಮೀಪದ ಬರ್ಗುಳದಲ್ಲಿ ಮರ ಬಿದ್ದಿರುವುದು.
ಭಾರಿ ಗಾಳಿ, ಮಳೆಗೆ ಶಿಶಿಲ ಸಮೀಪದ ಬರ್ಗುಳದಲ್ಲಿ ಮರ ಬಿದ್ದಿರುವುದು.
Published on
ಕೊಕ್ಕಡ: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ಶಿಶಿಲ ಸಮೀಪದ ಬರ್ಗುಳದಲ್ಲಿ ಸಂಭವಿಸಿದೆ.
ಶಿಶಿಲ ಗ್ರಾಮದ ದೇನೋಡಿ ನಿವಾಸಿ ರತೀಶ್ ಪೂಜಾರಿ ಕೊಕ್ಕಡದಿಂದ ಶಿಶಿಲಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಭಾರಿ ಗಾಳಿ, ಮಳೆಗೆ ರಸ್ತೆ ಬದಿಯಲ್ಲಿದ್ದ ಮರ ಬೈಕ್‌ನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ರತೀಶ್‌ಗೆ ಯಾವುದೇ ತೊಂದರೆಯಾಗಿಲ್ಲ. ಮರ ಬಿದ್ದ ಸಂದರ್ಭ ರಸ್ತೆ ಬದಿಯಿದ್ದ ವಿದ್ಯುತ್ ತಂತಿ ಮೇಲೆ ಬಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಘಟನೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಧರ್ಮಸ್ಥಳ ಶೌರ್ಯ ವಿಪತ್ತಿನ ಅರಸಿನಮಕ್ಕಿ-ಶಿಶಿಲ ಘಟಕದ ಸದಸ್ಯರಾದ ಅವಿನಾಶ್ ಭಿಡೆ, ರಮೇಶ್, ಕುಶಾಲಪ್ಪ ಗೌಡ, ರಾಧಾಕೃಷ್ಣ ಗುತ್ತು, ಸ್ಥಳೀಯರಾದ ಮೋಹನ್ ಗೌಡ, ಮಾಧವ ನಾಯ್ಕ, ಲಕ್ಷ್ಮಣ ಆಚಾರ್, ಕೃಷ್ಣ ನಾಯ್ಕ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಸ್ಥಳಕ್ಕೆ ಪಂಚಾಯಿತಿ ಸಿಬ್ಬಂದಿ, ಮೆಸ್ಕಾಂ ಪವರ್‌ಮನ್ ಸಂತೋಷ್ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net