ಸಾಂತ್ಯ ರಸ್ತೆಯಲ್ಲಿ ತೆರವಾಗದ ಮರದ ಗೆಲ್ಲುಗಳು

ನೆಟ್ಟಣಿಗೆ ಮುಡ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ಕಾವು-ಈಶ್ವರಮಂಗಲ ರಸ್ತೆ ತಿರುವಿನಲ್ಲಿರುವ ಮರದ ಗೆಲ್ಲುಗಳು.
ನೆಟ್ಟಣಿಗೆ ಮುಡ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ಕಾವು-ಈಶ್ವರಮಂಗಲ ರಸ್ತೆ ತಿರುವಿನಲ್ಲಿರುವ ಮರದ ಗೆಲ್ಲುಗಳು.
Published on

ಪುತ್ತೂರು ಗ್ರಾಮಾಂತರ: ಕರ್ನಾಟಕದಿಂದ ಕೇರಳ ಸಂಪರ್ಕದ ಅಂತಾರಾಜ್ಯ ಸಂಪರ್ಕ ರಸ್ತೆಯಲ್ಲಿ ಕಾವು-ಈಶ್ವರಮಂಗಲ ನಡುವಿನ ಸಾಂತ್ಯ ಎಂಬಲ್ಲಿ ರಸ್ತೆಯ ಅರ್ಧಭಾಗವನ್ನು ಆವರಿಸಿಕೊಂಡಿರುವ ಮರದ ಗೆಲ್ಲುಗಳನ್ನು ಸುಮಾರು ಒಂದು ತಿಂಗಳಿನಿಂದ ತೆರವುಗೊಳಿಸದೆ ನಿರ್ಲಕ್ಷಿಸಲಾಗಿದೆ. ರಸ್ತೆಯ ತಿರುವಿನಲ್ಲೇ ಈ ಮರದ ಗೆಲ್ಲುಗಳು ಇರುವುದು ತೀರಾ ಅಪಾಯಕಾರಿಯಾಗಿದ್ದು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಸಾಂತ್ಯದಲ್ಲಿ ಕೆಲವು ದಿನಗಳ ಹಿಂದೆ ಮುರಿದು ಬಿದ್ದ ಮರಗಳ ಗೆಲ್ಲುಗಳನ್ನು ಹಾಗೇ ಬಿಡಲಾಗಿದೆ. ರಸ್ತೆಯ ತಿರುವಿನಲ್ಲಿ ಇರುವ ಕಾರಣ ಮಳೆ ಬರುವಾಗ ಮತ್ತು ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ತಕ್ಷಣಕ್ಕೆ ಕಾಣಿಸದ ಕಾರಣ ಅಫಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಅಪಾಯ ಸಂಭವಿಸುವುದಕ್ಕಿಂತ ಮುನ್ನವೇ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಇಲ್ಲವೇ ಸ್ಥಳೀಯ ಗ್ರಾಮ ಪಂಚಾಯಿತಿ ರಸ್ತೆಗೆ ಬಿದ್ದಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net