ಆಫ್ ಆಗದ ಟ್ರಾನ್ಸ್‌ಫಾರ್ಮರ್, ಲೈನ್‌ಮನ್ ಸಾವು

ಶೇಖ್ ಝಮೀರ್
ಶೇಖ್ ಝಮೀರ್
Published on

ಉಳ್ಳಾಲ:

ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಮುಂದಾದ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ಲೈನ್‌ಮನ್, ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರೋಡ್ ಪಿಲಾರು ನಿವಾಸಿ ಶೇಖ್ ಝಮೀರ್(49) ಮೃತಪಟ್ಟಿದ್ದಾರೆ.

ಉಚ್ಚಿಲ ನಯಾಪಟ್ಣದ ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷ ಇರುವ ಬಗ್ಗೆ ಮೆಸ್ಕಾಂಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಶೇಖ್ ಝಮೀರ್ ಹಾಗೂ ಸಹೋದ್ಯೋಗಿ ಸಂಗಪ್ಪ ಎಂಬುವರು ಸೋಮವಾರ ಬೆಳಗ್ಗೆ ದುರಸ್ತಿಗಾಗಿ ಸ್ಥಳಕ್ಕೆ ಹೋಗಿದ್ದರು. ಜಿಒಎಸ್(ಗ್ರೂಪ್ ಆಪರೇಟೆಡ್ ಸ್ವಿಚ್) ಆಫ್ ಆಗಿದೆಯೆಂದು ಭಾವಿಸಿದ ಝಮೀರ್ ಟ್ರಾನ್ಸ್‌ಫಾರ್ಮರ್ ಏರಿದ್ದರು. ಈ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗೆಸೆಯಲ್ಪಟ್ಟಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು. ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net