ಬಳಕೆಯಲ್ಲಿಲ್ಲದ ಕ್ರೆಡೆಟ್​ ಕಾರ್ಡ್​ನಿಂದ ಹಣ ವರ್ಗಾವಣೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಉಡುಪಿ: ಖಾಸಗಿ ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ಹೊಂದಿದ್ದ ಗ್ರಾಹಕರೊಬ್ಬರಿಗೆ ಕೋರಿಯರ್​ ಮೂಲಕ ಕ್ರೆಡಿಟ್​ ಕಾರ್ಡ್​ ಬಂದಿದ್ದು, ಇದನ್ನು ಉಪಯೋಗಿಸದಿದ್ದರೂ 2 ಲಕ್ಷ ರೂ. ಅನಾಮಿಕ ಖಾತೆಗೆ ವರ್ಗಾವಣೆಗೊಂಡಿದೆ.

ಸತೀಶ (41) ವಂಚನೆಗೊಳಗಾದವರು. ಯಾವುದೋ ಕೆಲಸದ ನಿಮಿತ್ತ ಬ್ಯಾಂಕಿಗೆ ಹೋಗಿದ್ದಾಗ ವಿಯ ತಿಳಿದಿದ್ದು, ಬ್ಯಾಂಕಿನವರು ನೀಡಿರುವ ಕ್ರೆಡಿಟ್​ ಲಿಮಿಟ್​ 2 ಲಕ್ಷ ರೂ. ಸಂಪೂರ್ಣವಾಗಿ ಉಪಯೋಗಿಸಿರುತ್ತೀರಿ ಎಂದು ತಿಳಿಸಿದ್ದರು. ಕ್ರೆಡಿಟ್​ ಕಾರ್ಡ್​ ದೊರೆತ ದಿನವೇ 2 ಲಕ್ಷ ರೂ. ಅನಅಮಿಕ ಖಾತೆಗೆ ಜಮಾವಾಗಿರುವ ಬಗ್ಗೆ ತಿಳಿಸಿದ್ದರು. ಕಾರ್ಡಿನ ಪಿನ್​ ಜನರೇಟ್​ ಮಾಡದೇ ಹಾಗೇ ಇಟ್ಟಿದ್ದರೂ ಅಪರಿಚಿತ ದುಷ್ಕರ್ಮಿಗಳು ಆನ್​ ಲೈನ್​ ಮುಖೇನ ಕ್ರೆಡಿಟ್​ ಕಾರ್ಡ್​ ಒಟಿಪಿ ಪಡೆದು 2 ಲಕ್ಷ ರೂ. ಉಪಯೋಗಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net