ಮೆಸ್ಕಾಂಗೆ ವರ್ಗಾವಣೆ ಕಂಟಕ!

Mescom
Mescom
Published on
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಮೊದಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಮೆಸ್ಕಾಂಗೆ ಪವರ್‌ಮನ್‌ಗಳ ವರ್ಗಾವಣೆ ತಲೆ ನೋವಾಗಿ ಪರಿಣಮಿಸಿದ್ದು, ಪೂರ್ಣ ಪ್ರವಾಣದಲ್ಲಿ ಹೊಸ ವಾರ್ಗದಾಳುಗಳ ನೇಮಕಾತಿ ಆಗದಿರುವುದು ಸಮಸ್ಯೆ ಸೃಷ್ಟಿಸಿದೆ.
ರಾಜ್ಯದಲ್ಲಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸರ್ಕಾರ ಜೂನ್ 30ರ ಆದೇಶದಲ್ಲಿ ರಾಜ್ಯದಲ್ಲಿ ಒಟ್ಟು 433 ಮಂದಿ ಪವರ್‌ಮನ್ ಮತ್ತು ವಾರ್ಗದಾಳುಗಳನ್ನು ವರ್ಗಾವಣೆ ವಾಡಿ ಆದೇಶ ಹೊರಡಿಸಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಮೂರು ಉಪ ವಿಭಾಗ ವ್ಯಾಪ್ತಿಯಲ್ಲಿ 28 ಮಂದಿ ವರ್ಗಾವಣೆ ಪಟ್ಟಿಯಲ್ಲಿದ್ದಾರೆ. ಬೈಂದೂರು 5, ಗಂಗೊಳ್ಳಿ 4, ನಾಡ 5, ವಂಡ್ಸೆ 6, ತಲ್ಲೂರು 3 ಹಾಗೂ ಶಂಕರನಾರಾಯಣ ವ್ಯಾಪ್ತಿಯಲ್ಲಿ 5 ಮಂದಿಗೆ ವರ್ಗಾವಣೆಗೆ ಆದೇಶ ಆಗಿದೆ.
ವರ್ಗಾವಣೆಯಾಗಿರುವ ಪವರ್‌ಮನ್ ಸ್ಥಾನಕ್ಕೆ ಹೊಸಬರ ನೇಮಕಾತಿ ಆಗಿದ್ದರೂ ಅವರಿಗೆ ಮೂರು ವರ್ಷ ತರಬೇತಿ ಅವಧಿ ಇದೆ. ಈ ಸಮಯದಲ್ಲಿ ವಿದ್ಯುತ್ ಕಂಬ ಹತ್ತಲು ಅವರಿಗೆ ಅನುಮತಿ ಇಲ್ಲ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಮಂದಿ ಪವರ್‌ಮನ್‌ಗಳು ವರ್ಗಾವಣೆಗೊಳ್ಳುತ್ತಿದ್ದರೆ, ಹೊಸದಾಗಿ ನೇಮಕಾತಿ ಆಗಿರುವ ಪವರ್‌ಮನ್‌ಗಳು ಕಂಬ ಹತ್ತಬಾರದೆಂದಾದರೆ ವಿದ್ಯುತ್ ಸಂಬಂಧಿ ದೋಷಗಳು ಕಂಡು ಬಂದರೆ ಕಂಬ ಹತ್ತುವುದು ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ.
ಕೆಲವು ಪವರ್‌ಮನ್‌ಗಳು ಆರೋಗ್ಯ ಮತ್ತಿತರ ಸಮಸ್ಯೆಗಳಿಂದ ಕಂಬ ಹತ್ತುವ ಸ್ಥಿತಿಯಲ್ಲಿಲ್ಲ. ಹೀಗಿರುವಾಗ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಯನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಹೊಸ ಪವರ್‌ಮನ್‌ಗಳು ಆಯಾ ಪರಿಸರದ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗೆ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಚಿಂತೆ ಇಲಾಖೆ ಹಿರಿಯ ಅಧಿಕಾರಿಗಳನ್ನು ಕಾಡುತ್ತಿದೆ.

ಸಿಬ್ಬಂದಿ ಕೊರತೆ

ತಲ್ಲೂರು ಉಪವಿಭಾಗ ವ್ಯಾಪ್ತಿಯಲ್ಲಿ ವರ್ಗಾವಣೆಗೊಂಡಿರುವ 18 ಪವರ್‌ಮನ್‌ಗಳ ಸ್ಥಾನಕ್ಕೆ 9 ಮಂದಿ, ಬೈಂದೂರು ಉಪವಿಭಾಗ ವ್ಯಾಪ್ತಿಯಲ್ಲಿ ವರ್ಗಾವಣೆಗೊಂಡಿರುವ 5 ಪವರ್‌ಮನ್‌ಗಳ ಸ್ಥಾನಕ್ಕೆ 5 ಮಂದಿ ಹಾಗೂ ಶಂಕರನಾರಾಯಣ ಉಪವಿಭಾಗ ವ್ಯಾಪ್ತಿಯಲ್ಲಿ ವರ್ಗಾವಣೆಗೊಂಡಿರುವ 5 ಪವರ್‌ಮನ್‌ಗಳ ಸ್ಥಾನಕ್ಕೆ 2 ಮಂದಿ ಹೊಸ ಪವರ್‌ಮನ್‌ಗಳ ನೇಮಕಾತಿಯಾಗಿದೆ. ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಈ ವ್ಯಾಪ್ತಿಯಲ್ಲಿ ಈಗಿರುವುದಕ್ಕಿಂತ ಕಡಿಮೆ ಸಂಖ್ಯೆಯ ಹೊಸ ಪವರ್‌ಮನ್‌ಗಳ ನೇಮಕಾತಿ ವಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇಲಾಖೆ, ಸರ್ಕಾರವೇ ನೇರ ಹೊಣೆ

ಪವರ್‌ಮನ್‌ಗಳ ಕೊರತೆ ಉಂಟಾಗಿ ವಿದ್ಯುತ್ ಸಂಬಂಧಿ ಸಮಸ್ಯೆಗಳು ಹಾಗೂ ಅವಘಡಗಳು ಸಂಭವಿಸಿದರೆ ಅದಕ್ಕೆ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸರ್ಕಾರದ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವರ್ಗಾವಣೆ ಆದೇಶ ನೀಡಿದ್ದರಿಂದ ತೆರವಾಗುವ ಸ್ಥಳಗಳಿಗೆ ಬೇರೆ ಪವರ್‌ಮನ್‌ಗಳ ನೇಮಕ ಆಗಿದ್ದರೂ ಅವರ ತರಬೇತಿ ಅವಧಿ ಮುಗಿಯುವ ತನಕ ವರ್ಗಾವಣೆ ಹೊಂದಿದ ಪವರ್‌ಮನ್‌ಗಳಿಗೆ ಚಲನಾದೇಶ ನೀಡಬಾರದು ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಲಿ ಇರುವ ಸ್ಥಳಗಳಿಗೆ ಪೂರ್ಣ ಪ್ರವಾಣದಲ್ಲಿ ಪವರ್‌ಮನ್‌ಗಳನ್ನು ನೇಮಕ ವಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲೈನ್‌ಮನ್‌ಗಳ ಕೊರತೆ ಇರುವ ಈ ಸಮಯದಲ್ಲಿ ಹಾಗೂ ಇಷ್ಟೊಂದು ಪ್ರವಾಣದ ಪವರ್‌ಮನ್‌ಗಳನ್ನು ವರ್ಗಾವಣೆ ವಾಡಿರುವುದು ಸರಿಯಾದ ಕ್ರಮವಲ್ಲ. ಹೊಸದಾಗಿ ನೇಮಕಗೊಂಡಿರುವ ಪವರ್‌ಮನ್‌ಗಳಿಗೆ ಮೂರು ವರ್ಷ ತರಬೇತಿ ಅವಧಿ ಇರುವ ಕಾರಣ ಈಗಿರುವ ಸಿಬ್ಬಂದಿಗೆ ಹೆಚ್ಚುವರಿ ಹೊಣೆ ಬೀಳಲಿದೆ. ಪವರ್‌ಮನ್‌ಗಳ ವರ್ಗಾವಣೆಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ಸರ್ಕಾರವೇ ಜವಾಬ್ದಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net