ಮನುಷ್ಯನ ಸ್ವಾರ್ಥದಿಂದ ಪರಿಸರ ಹಾನಿ

ಉಡುಪಿಯ ಪೂರ್ಣಪ್ರಜ್ಞ ಪ.ಪೂ. ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಿಗೆ ಆಯೋಜಿಸಿದ್ದ ಪುನಶ್ಚೇತನಾ ತರಬೇತಿ ಕಾರ್ಯಾಗಾರವನ್ನು ಡಾ. ಎ.ಪಿ. ಭಟ್​ ಉದ್ಘಾಟಿಸಿದರು. ಮಾರುತಿ ಎಲ್​., ಪ್ರಶಾಂತ್​ ಶೆಟ್ಟಿ, ಹರೀಶ್​ ಕೋಟ್ಯಾನ್​, ಡಾ. ವಿಶಾಲಾಕ್ಷಿ, ಪದ್ಮಾ ಎ. ಆಚಾರ್ಯ ಇದ್ದರು.
ಉಡುಪಿಯ ಪೂರ್ಣಪ್ರಜ್ಞ ಪ.ಪೂ. ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಿಗೆ ಆಯೋಜಿಸಿದ್ದ ಪುನಶ್ಚೇತನಾ ತರಬೇತಿ ಕಾರ್ಯಾಗಾರವನ್ನು ಡಾ. ಎ.ಪಿ. ಭಟ್​ ಉದ್ಘಾಟಿಸಿದರು. ಮಾರುತಿ ಎಲ್​., ಪ್ರಶಾಂತ್​ ಶೆಟ್ಟಿ, ಹರೀಶ್​ ಕೋಟ್ಯಾನ್​, ಡಾ. ವಿಶಾಲಾಕ್ಷಿ, ಪದ್ಮಾ ಎ. ಆಚಾರ್ಯ ಇದ್ದರು.
Published on

ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್​ ಅನಿಸಿಕೆ

* ಪಿಪಿಸಿಯಲ್ಲಿ ಜೀವಶಾಸ್ತ್ರ ಉಪನ್ಯಾಸಕರಿಗೆ ಕಾರ್ಯಾಗಾರ

ಉಡುಪಿ: ಮನುಷ್ಯನ ಸ್ವಾರ್ಥದಿಂದಾಗಿ ಪ್ರಪಂಚದೆಲ್ಲೆಡೆ ಪರಿಸರ ನಾಶವಾಗುತ್ತಿದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಲ್ಲಿ ವ್ಯತಿರಿಕ್ತ ಪರಿಣಾಮ ಅನುಭವಿಸುತ್ತಿದ್ದೇವೆ. ಪ್ರಕೃತಿಯ ದುರ್ಬಳಕೆಯಿಂದ ಇತ್ತೀಚೆಗೆ ಮಳೆಯೂ ಕಡಿಮೆಯಾಗುತ್ತಿದೆ. ಇದಕ್ಕೆಲ್ಲ ಮನುಷ್ಯನ ವ್ಯವಹಾರವೇ ಕಾರಣವಾಗಿದೆ ಎಂದು ಉಡುಪಿ ಶ್ರೀ ಅದಮಾರು ಮಠ ಎಜುಕೇಷನ್​ ಕೌನ್ಸಿಲ್​ ಬೆಂಗಳೂರಿನ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್​ ತಿಳಿಸಿದರು. 
ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಪ.ಪೂ. ಕಾಲೇಜು ಜೀವಶಾಸ್ತ್ರ ಉಪನ್ಯಾಸಕರ ವೇದಿಕೆಯ ವತಿಯಿಂದ ಜಿಲ್ಲೆಯ ಜೀವಶಾಸ್ತ್ರ ಉಪನ್ಯಾಸಕರಿಗಾಗಿ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಾರುತಿ ಎಲ್​. ಮಾತನಾಡಿ, ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಪ್ರೀತಿಯಿಂದ ಬುದ್ಧಿ ಹೇಳಬೇಕು. ಉಪನ್ಯಾಸಕ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.
ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್​ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಪ್ರಜ್ಞ ಪ.ಪೂ. ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ರಮೇಶ್​ ಹಂದೆ ಮತ್ತು ಕಾಲೇಜಿನ ಪ್ರಾಂಶುಪಾಲ ಸಿ.ಸುರೇಶ್​ ತುಂಗ ಶುಭಾಶಂಸನೆಗೈದರು.
ಸದ್ಯದಲ್ಲೇ ನಿವೃತ್ತರಾಗಲಿರುವ ಉಪನಿರ್ದೇಶಕ ಮಾರುತಿ ಎಲ್​. ಸರ್ಕಾರಿ ಪ.ಪೂ. ಕಾಲೇಜು ಮಲ್ಪೆಯ ಪ್ರಾಂಶುಪಾಲ ವರ್ಗೀಸ್​, ಸರ್ಕಾರಿ ಪ.ಪೂ. ಕಾಲೇಜು ಬಜಗೋಳಿಯ ಪ್ರಾಂಶುಪಾಲ ಕೆ.ಪಿ. ಲಕ್ಷ್ಮೀನಾರಾಯಣ ಅವರನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.
ಸಂಪನ್ಮೂಲ ಉಪನ್ಯಾಸಕ ಪ್ರಶಾಂತ್​ ಶೆಟ್ಟಿ ಅಳದಂಗಡಿ ಅವರು 'ಪೆಡಿಗ್ರೀ ಅನಾಲೈಸಿಸ್​' ವಿಷಯ  ಕುರಿತು, ಉಪನ್ಯಾಸಕ ಹರೀಶ್​ ಕೋಟ್ಯಾನ್​ 'ಲೆಸ್ಸನ್​ ಬೇಸ್ಡ್​ ಅನಾಲೈಸಿಸ್​' ಕುರಿತು ಉಪನ್ಯಾಸ ನೀಡಿದರು. ಜೀವಶಾಸ್ತ್ರದ ಪ್ರಾಯೋಗಿಕ ಪಠ್ಯಕ್ರಮ ಹಾಗೂ ಇನ್ನಿತರ ಸಮಸ್ಯೆಗಳ ನಿವಾರಣೆ ಬಗ್ಗೆ ಚರ್ಚಿಸಲಾಯಿತು.
ಕಳೆದ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಶೇ.100 ಫಲಿತಾಂಶ ಗಳಿಸಿದ ಕಾಲೇಜುಗಳ ಉಪನ್ಯಾಸಕರನ್ನು ಗೌರವಿಸಲಾಯಿತು. 
ವೇದಿಕೆಯ ಕಾರ್ಯದರ್ಶಿ ಡಾ. ವಿಶಾಲಾಕ್ಷಿ ಸ್ವಾಗತಿಸಿದರು. ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಪದ್ಮಾ ಎ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾವರ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಜಗನ್ನಾಥ ಗಾಣಿಗ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net