ಉಡುಪಿ ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಪ್ರಸಾದ್ ಶೆಟ್ಟಿ ಕುತ್ಯಾರು ಉದ್ಘಾಟಿಸಿದರು. ಅರುಣಕುಮಾರ್ ಶೆಟ್ಟಿ, ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಅನೂಷಾ ಕೋಟ್ಯಾನ್, ಎಂ. ಗಣೇಶ್ ಕಿಣಿ, ಬಿಂದು ನಾಯರ್ ಇತರರಿದ್ದರು.
Published on:
Copied
Follow Us
* ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಕುತ್ಯಾರು ಉದ್ಘಾಟನೆ
ಉಡುಪಿ: ಉಡುಪಿ ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಕಿನ್ನಿಮುಲ್ಕಿ ಸಂಸ್ಥೆಯ ಸಿಬ್ಬಂದಿಗೆ ಮಣಿಪಾಲದ ಖಾಸಗಿ ಹೋಟೆಲ್ನ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಲಾಗಿತ್ತು.
ಶಿರ್ವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಕುತ್ಯಾರು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಅರುಣಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ನ ಪ್ರೊ. ಬಿಂದು ನಾಯರ್ ಅವರು 'ಟೋಟಲ್ ಕ್ವಾಲಿಟಿ ಆಫ್ ಮೆನೇಜ್ಮೆಂಟ್' ವಿಷಯ ಕುರಿತು ತರಬೇತಿ ನೀಡಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ (ನಿ.)ನ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಅನೂಷಾ ಕೋಟ್ಯಾನ್, ಸಂಸ್ಥೆಯ ಉಪಾಧ್ಯಕ್ಷ ಎಂ. ಗಣೇಶ್ ಕಿಣಿ, ಹಿರಿಯ ನಿರ್ದೇಶಕ ನಾರಾಯಣ ಬಲ್ಲಾಳ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.