ಕೊಡಾಬೈಲು ರಸ್ತೆಯಲ್ಲಿ ಸಂಚಾರವೇ ದುಸ್ತರ

 ಹೆಂಗವಳ್ಳಿ ಸಮೀಪದ ಕೊಡಾಬೈಲು ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿರುವುದು.
ಹೆಂಗವಳ್ಳಿ ಸಮೀಪದ ಕೊಡಾಬೈಲು ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿರುವುದು.
Published on
ಕೆ.ಸಂಜೀವ ಆರ್ಡಿ ಸಿದ್ದಾಪುರ
ಗೋಳಿಯಂಗಡಿ ಕೊಡಾಬೈಲು-ಅವಾಸೆಬೈಲು ಪ್ರಮುಖ ಸಂಪರ್ಕ ರಸ್ತೆಯ ತೊಂಬತ್ತು ಕ್ರಾಸ್‌ನಿಂದ ಕೊಡಾಬೈಲು ರಸ್ತೆ ಕೆಲವು ವರ್ಷಗಳಿಂದ ಡಾಂಬರು ಕಾಣದೆ ಜಲ್ಲಿ ಎದ್ದು ಭಾರಿ ಗಾತ್ರದ ಹೊಂಡಗುಂಡಿಗಳು ಸೃಷ್ಟಿಯಾಗಿ ರಸ್ತೆಯೇ ವಾಯಾವಾಗಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದೆ.
ಹೆಂಗವಳ್ಳಿ ಗ್ರಾಪಂ ವ್ಯಾಪ್ತಿಯ ಕೊಡಾಬೈಲು ವಾರ್ಗವಾಗಿ ಸಿದ್ದಾಪುರ, ಅವಾಸೆಬೈಲು, ಹೆಂಗವಳ್ಳಿ, ರಟ್ಟಾಡಿ, ತೊಂಬತ್ತು, ಗೋಳಿಯಂಗಡಿ, ಮರೂರು, ಅಲ್ಬಾಡಿ, ತೊನ್ನಾಸೆ, ಬೆಳ್ವೆ, ಶೇಡಿಮನೆ, ಅರಸಮ್ಮಕಾನು ಸೇರಿದಂತೆ ಇನ್ನಿತರ ಭಾಗಗಳಿಗೆ ಸಂಚರಿಸಲು ಇದು ಪ್ರಮುಖ ಸಂಪರ್ಕ ರಸ್ತೆಯಾಗಿದೆ.
ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ದ್ವಿಚಕ್ರ ವಾಹನ ಸವಾರರು ಹೊಂಡ ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬೀಳುವುದು ಸಾಮಾನ್ಯ ಎಂಬಂತಾಗಿದೆ. ರಸ್ತೆ ದುರಸ್ತಿಗಾಗಿ ಜಿಲ್ಲಾ ಪಂಚಾಯಿತಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲ ಆರಂಭಕ್ಕು ಮುನ್ನವೇ ರಸ್ತೆಯನ್ನು ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಡಾಬೈಲು ರಸ್ತೆ ಮೂಲಕ ತೊಂಬತ್ತು, ಹೆಂಗವಳ್ಳಿ, ಸಿದ್ದಾಪುರ, ಅವಾಸೆಬೈಲು, ಗೋಳಿಯಂಗಡಿ ಶೇಡಿಮನೆ ಸೇರಿದಂತೆ ಹಲವಾರು ಭಾಗಗಳಿಗೆ ಸಂಚರಿಸಲು ಭಾರಿ ಅನುಕೂಲವಾಗುತ್ತದೆ. ರಸ್ತೆ ದುರಸ್ತಿಯಾಗದೆ ಬಹಳ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಜನರಿಗೆ ಉತ್ತಮ ಸೌಲಭ್ಯ ಒದಗಿಸಬೇಕು.

ರಸ್ತೆಯಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿ ಜನರಿಗೆ ನಿತ್ಯವೂ ಸಮಸ್ಯೆಯಾಗುತ್ತಿದೆ. ಶಾಲಾ ಮಕ್ಕಳು, ಅನಾರೋಗ್ಯದಿಂದ ಬಳಲುವವರು, ವಯೋ ವೃದ್ಧರು ಸಂಚರಿಸಲು ಬಹಳಷ್ಟು ತೊಂದರೆ ಪಡುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಂಡು ಜನರ ಬೇಡಿಕೆಗೆ ಸ್ಪಂದಿಸಬೇಕಾಗಿದೆ.

ಹೆಂಗವಳ್ಳಿ ಗ್ರಾಪಂ ವ್ಯಾಪ್ತಿಯ ಕೊಡಾಬೈಲು ರಸ್ತೆ ಹದಗೆಟ್ಟಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ವಾಡಲಾಗಿದೆ. ರಸ್ತೆ ದುರಸ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net