ಸಾಂಪ್ರದಾಯಿಕ ಕಾರ್ಯಕ್ರಮ ಸಾಮಾಜಿಕ ಕಳಕಳಿ

 ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ  ಶಾಲೆ ಸಭಾಭವನದಲ್ಲಿ ಕಿಲ್ಪಾಡಿ ದುರ್ಗಾಪರಮೇಶ್ವರಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ, ಮಾಸಿಕ ಸಂತೆ, ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್, ಕಿಲ್ಪಾಡಿ ಪಿಡಿಒ ಪೂರ್ಣಿಮಾ ಇದ್ದರು.
ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆ ಸಭಾಭವನದಲ್ಲಿ ಕಿಲ್ಪಾಡಿ ದುರ್ಗಾಪರಮೇಶ್ವರಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ, ಮಾಸಿಕ ಸಂತೆ, ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್, ಕಿಲ್ಪಾಡಿ ಪಿಡಿಒ ಪೂರ್ಣಿಮಾ ಇದ್ದರು.
Published on
ಮೂಲ್ಕಿ: ತುಳುನಾಡಿನ ಸಂಪ್ರದಾಯದಲ್ಲಿ ಆಟಿ ತಿಂಗಳು ಎಂದರೆ ಮಳೆಗಾಲದ ಪವಿತ್ರ ತಿಂಗಳು. ಈ ತಿಂಗಳಲ್ಲಿ ಆರೋಗ್ಯ ರಕ್ಷಣೆ , ಸಾಂಪ್ರದಾಯಿಕ ಆಚರಣೆಗಳಿಗೆ ಮಹತ್ವದ್ದಾಗಿದೆ. ತುಳುನಾಡಿನ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಒಗ್ಗಟ್ಟಿನ ಮೂಲಕ ಆಚರಿಸಿ ಸಾಮಾಜಿಕ ಕಳಕಳಿ ಬಿಂಬಿಸುತ್ತಿರುವ ಒಕ್ಕೂಟದ ಕಾರ್ಯ ಅಭಿನಂದನೀಯ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೇಳಿದರು.
ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆ ಸಭಾಭವನದಲ್ಲಿ ಕಿಲ್ಪಾಡಿ ದುರ್ಗಾಪರಮೇಶ್ವರಿ ಸಂಜೀವಿನಿ ಒಕ್ಕೂಟ ಮಾಸಿಕ ಸಭೆ, ಮಾಸಿಕ ಸಂತೆ, ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಹೇಶಕುಮಾರ್ ಆಟಿಯ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಮಹಿಳೆಯರು ಆಟಿಯ ತಿಂಗಳ ವಿವಿಧ ಖಾದ್ಯ ಪ್ರದರ್ಶಿಸಿ ಮಾಹಿತಿ ನೀಡಿದರು. ಹೆಚ್ಚಿನ ಖಾದ್ಯ ಪ್ರದರ್ಶಿಸಿದ ಸಂಘಕ್ಕೆ ಬಹುಮಾನ ನೀಡಲಾಯಿತು.
ಕಿಲ್ಪಾಡಿ ಪಿಡಿಒ ಪೂರ್ಣಿಮಾ, ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋಪಿನಾಥ ಪಡಂಗ, ತಾಲೂಕುಮಟ್ಟದ ಒಕ್ಕೂಟ ಅಧ್ಯಕ್ಷೆ ಪ್ರಜ್ವತಾ, ಟಿಪಿಎಂ ನಿಖಿಲ್, ತಾಲೂಕು ಪಿಆರ್‌ಐ ಮಂಜುಳಾ, ಪಿಆರ್‌ಐಇಪಿ ಶ್ವೇತಾ, ಅಶ್ಮಿತಾ, ಲತೀಶ್ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಕೃಷಿ ಸಖಿ ಹೇಮಲತಾ, ಪಶು ಸಖಿ ಪ್ರೀತಿಕಾ ಡಿ.ಅಮೀನ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net