ಫೆ.21ರ ವರೆಗೆ ಸಾಂಪ್ರದಾಯಿಕ ಕಂಬಳ ಸ್ಪರ್ಧೆ

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)
Published on: 

* ಪ್ರಥಮ ಹಂತದ ವೇಳಾಪಟ್ಟಿ ಪ್ರಕಟ

ಉಡುಪಿ: ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳ ಪ್ರಥಮ ಹಂತದ ವೇಳಾಪಟ್ಟಿ ಪ್ರಕಟಗೊಂಡಿದ್ದು, ನ.19ರಿಂದ ಆರಂಭಗೊಂಡಿದ್ದು, ಫೆ.21ರ ವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ.

ನ.19ರಂದು ನಾವುಂದದಲ್ಲಿ ನಡೆದಿದ್ದು, ನ.21 ಹಕ್ರೆಮಠ, ನ.22 ಕೆರಗದ್ದೆ ಹಾಗೂ ಉಳ್ಳೂರು, ನ.26 ಮಣೂರು ಮತ್ತು ಯಡ್ತಾಡಿ, ನ.27 ಬಾರ್ಕೂರು, ಬಿಲ್ಲಾಡಿ ಹಾಗೂ ಅಲ್ಬಾಡಿ, ನ.28 ಕೆರ್ಗಾಲ್​ ಹಾಗೂ ತೋನ್ಸೆ, ನ.29 ಬನ್ನಾಡಿ, ಇಡೂರು ಕುಂಜ್ಞಾಡಿ, ಎಲ್ಲೂರು ಹಾಗೂ ಕೆಂಜೂರು, ನ.30ರಂದು ಕೆಂಚನೂರು ಹಾಗೂ ಹೆಗ್ಗುಂಜೆ.

ಡಿ.1ರಂದು ಚೇರ್ಕಾಡಿ, ಡಿ.2 ತಲ್ಲೂರು ಮೂಡ್ಲಕಟ್ಟೆ, ಡಿ.3 ಗುಲ್ವಾಡಿ, ವಂಡಾರು, ಡಿ.4 ಕೆರಾಡಿ ಹಾಗೂ ಕಡ್ರಿ, ಡಿ.5 ಶಿರೂರು ಮುದ್ದುಮನೆ ಹಾಗೂ ಮಂಡಾಡಿ , ಡಿ.6 ತಗ್ಗರ್ಸೆ ಹಾಗೂ ಹೊಸೂರು, ಡಿ.7 ಹಂದಾಡಿ, ಡಿ.8 ತೊನ್ನಾಸೆ, ಡಿ.9 ಕುಚ್ಚೂರು, ಡಿ.11 ಆತ್ರಾಡಿ, ಡಿ.12 ಮೊಳಹಳ್ಳಿ, ಕೊರ್ಗಿ ಹಾಗೂ ಹೊರ್ಲಾಳಿ, ಡಿ.13 ಹೆರಂಜೆ, ವಡ್ಡಂಬೆಟ್ಟು ಹಾಗೂ ನಡೂರು, ಫೆ.21 ಬೈಂದೂರಿನಲ್ಲಿ ಕಂಬಳ ನಡೆಯಲಿದೆ.

ಮಿಕ್ಕುಳಿದ ದ್ವಿತೀಯ ಹಂತದ ಕಂಬಳಗಳ ದಿನಾಂಕ ಶೀಘ್ರ ತಿಳಿಸಲಾಗುವುದು ಎಂದು ಸಾಂಪ್ರದಾಯಿಕ ಕಂಬಳ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.