ಕುಂಬಳೆಯಲ್ಲಿ ವ್ಯಾಪಾರಿಗಳ ಪ್ರತಿಭಟನೆ

ಕುಂಬಳೆಯಲ್ಲಿ ವ್ಯಾಪಾರಿಗಳಿಂ ಪ್ರತಿಭಟನೆ ನಡೆಯಿತು.
ಕುಂಬಳೆಯಲ್ಲಿ ವ್ಯಾಪಾರಿಗಳಿಂ ಪ್ರತಿಭಟನೆ ನಡೆಯಿತು.
Published on
ಕುಂಬಳೆ: ಪೇಟೆಗೆ ಆಗಮಿಸುವ ಪ್ರಯಾಣಿಕರು ಸಹಿತ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗದ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕುಂಬಳೆಯ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ಕುಂಬಳೆ ಪೇಟೆಗೆ ಆಗಮಿಸುವ ಪ್ರಯಾಣಿಕರು ಹಲವು ತಿಂಗಳುಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡು ಸಹನೆಗೆಟ್ಟ ವ್ಯಾಪಾರಿಗಳು ಕುಂಬಳೆ ಪಂಚಾಯಿತಿ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ವ್ಯಾಪಾರ ಭವನದಲ್ಲಿ ಚಳವಳಿ ಘೋಷಣೆ ಸಮಾವೇಶ ನಡೆಸಿದ ಬಳಿಕ ಪೇಟೆಯಲ್ಲಿ ನೂರಾರು ವ್ಯಾಪಾರಿಗಳು ಒಗ್ಗೂಡಿ ಮೆರವಣಿಗೆ ನಡೆಸಿ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇನ್ನಾದರೂ ಪಂಚಾಯಿತಿ ಮುಂದಾಗದಿದ್ದಲ್ಲಿ ಚಳವಳಿ ತೀವ್ರಗೊಳಿಸುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ. ಜುಲೈ 2ರಂದು ಕುಂಬಳೆಯ ಎಲ್ಲ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಿ ಪಂಚಾಯಿತಿ ಕಚೇರಿಗೆ ಬಹುಜನ ಮೆರವಣಿಗೆ ನಡೆಸಲಾಗುವುದೆಂದು ತಿಳಿಸಲಾಗಿದೆ.
ಪ್ರತಿಭಟನೆಯನ್ನು ರಾಜೇಶ್ ಮನಯತ್ತ್ ಉದ್ಘಾಟಿಸಿದರು. ಅನ್ವರ್ ಅಧ್ಯಕ್ಷತೆ ವಹಿಸಿದರು. ಸತ್ತಾರ್, ಸಂತೋಷ್, ಅಶ್ರಫ್, ಖಾದರ್ ಮಾತನಾಡಿದರು. ಮೆರವಣಿಗೆಗೆ ಹೈದರ್, ಮಮ್ಮಿಂಞ್ಞೆ ಚಕ್ಕರ, ಸಿದ್ದಿಕ್ ಮುಬಾರಕ್, ಸವಾದ್, ಇರ್ಷಾದ್, ಮನೀಶ್ ನಾರಾಯಣ್, ಮಹೇಶ್ ಕುಮಾರ್, ಮನ್ಸೂರ್, ಲತೀಫ್, ಶಂಕರ ಗಟ್ಟಿ, ಅಬ್ಬಾಸ್ ನೇತೃತ್ವ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net