ಕಾಸರಗೋಡಿನಲ್ಲಿ ತಂಬಾಕು ವಶ, ಇಬ್ಬರ ಬಂಧನ

 ತಂಬಾಕು ಉತ್ಪನ್ನ ವಶ
ತಂಬಾಕು ಉತ್ಪನ್ನ ವಶ
Published on
 ಕಾಸರಗೋಡು: ಜಿಲ್ಲೆಯ ವಿವಿಧೆಡೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭಾರಿ ಪ್ರವಾಣದಲ್ಲಿ ನಿಷೇಧಿತ ತಂಬಾಕು ಉತ್ಪನ್ನ ವಶಪಡಿಸಿ, ಇಬ್ಬರನ್ನು ಬಂಧಿಸಿ, ಸಾಗಾಟಕ್ಕೆ ಬಳಸಿದ್ದ ಮೂರು ಕಾರುಗಳನ್ನು ವಶಪಡಿಸಲಾಗಿದೆ.
ಚೆರ್ಕಳಪಾಡಿ ರಸ್ತೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 12,218 ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಲಾಗಿದೆ. ಮಧೂರು ಚೆಟ್ಟುಂಗುಳಿ ನಿವಾಸಿ ರಾಶಿದ್ ಎಂಬಾತನನ್ನು ಬಂಧಿಸಿ ಕಾರು ವಶಪಡಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 7,600 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಲಾಗಿದೆ. ಕಾರಿನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ವಿದ್ಯಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮಂಜೇಶ್ವರ ಠಾಣೆ ಪೊಲೀಸರು ತಲಪ್ಪಾಡಿ ಬಳಿ ನಡೆಸಿದ ಕಾರ್ಯಾಚರಣೆೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 26,112 ಪ್ಯಾಕೆಟ್ ತಂಬಾಕು ಉತ್ಪನ್ನ ಹಾಗೂ ಕಾರನ್ನು ವಶಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ಅಗರ್ತಿಮೂಲೆ ನಿವಾಸಿ ಮೊಯ್ದೀನ್‌ಕುಞಿ ಎಂಬಾತನನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net