ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಪೀಡಿಯಾಟ್ರಿಕ್ಸ್, ಆಥೋರ್ಪೆಡಿಕ್ಸ್, ಇ.ಎನ್.ಟಿ, ಚರ್ಮರೋಗ, ದಂತವೈದ್ಯಕಿಯ, ನೇತ್ರಶಾಸ್ತ್ರ, ಫಿಸಿಯೋಥೆರಪಿ, ಮನೋವೈದ್ಯಶಾಸ್ತ್ರ ಸೇರಿದಂತೆ ಹಲವು ಪ್ರಮುಖ ವಿಭಾಗಗಳಿದ್ದು, ಮೊದಲ ಮಹಡಿಯಲ್ಲಿ ವಿಶಾಲವಾದ ಹೊರರೋಗಿ ಸಮಾಲೋಚನಾ ಕೊಠಡಿಗಳಿವೆ. ಕಾರ್ಡಿಯಾಲಜಿ, ಸಾಂಕ್ರಾಮಿಕ ರೋಗಗಳು, ಸರ್ಜಿಕಲ್ ಮತ್ತು ಮೆಡಿಕಲ್ ಆಂಕೊಲಾಜಿ (ಕ್ಯಾನ್ಸರ್ ಚಿಕಿತ್ಸೆ), ನರವಿಜ್ಞಾನ, ನೆಫ್ರಾಲಜಿ, ನರಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ ಹಾಗೂ ಮೂತ್ರಶಾಸ್ತ್ರ ವಿಭಾಗದ ಪ್ರಮುಖ ತಜ್ಞ ವೈದ್ಯರು ಲಭ್ಯರಿದ್ದಾರೆ ಎಂದು ತಿಳಿಸಿದರು. ಆಸ್ಪತ್ರೆಯ ಉಪ ವೈದ್ಯಕಿಯ ಅಧೀಕ್ಷಕ ಡಾ. ರಾಜಾರಾಮ್ ಪೈ ಉಪಸ್ಥಿತರಿದ್ದರು.