ವೀರ ಯೋಧರ ಸ್ಮರಣೆಗಾಗಿ ತಿರಂಗಾ ಯಾತ್ರೆ

 ತ್ರಾಸಿಯಲ್ಲಿ ತಿರಂಗಾ ಯಾತ್ರೆ ನಡೆಯಿತು. ಪ್ರಮುಖರಾದ ಗುರುರಾಜ್ ಗಂಟಿಹೊಳೆ, ಕುತ್ಯಾರು ನವೀನ್ ಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್, ಕಾಡೂರು ಸುರೇಶ್ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ವಿಜಯ ಕೊಡವೂರು, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಅನಿತಾ ಆರ್.ಕೆ. ಮತ್ತಿತರರಿದ್ದರು.
ತ್ರಾಸಿಯಲ್ಲಿ ತಿರಂಗಾ ಯಾತ್ರೆ ನಡೆಯಿತು. ಪ್ರಮುಖರಾದ ಗುರುರಾಜ್ ಗಂಟಿಹೊಳೆ, ಕುತ್ಯಾರು ನವೀನ್ ಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್, ಕಾಡೂರು ಸುರೇಶ್ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ವಿಜಯ ಕೊಡವೂರು, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಅನಿತಾ ಆರ್.ಕೆ. ಮತ್ತಿತರರಿದ್ದರು.
Published on

ಕುಂದಾಪುರ: ದೇಶದ ಸ್ವಾತಂತ್ರೃಕ್ಕಾಗಿ ಸಹಸ್ರಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಯೋಧರು ಬಿಸಿಲು, ಮಳೆ, ಚಳಿ ಎನ್ನದೆ ದೇಶದ ಗಡಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಶ್ರೇಷ್ಠ ಸಂಸ್ಕೃತಿ, ಹಿರಿಮೆಯ ನಮ್ಮ ದೇಶದ ಸ್ವಾತಂತ್ರೃಕ್ಕಾಗಿ ಪ್ರಾಣ ತ್ಯಾಗ ಮಾಡಿದವರ, ಹಗಲಿರುಳೆನ್ನದೆ ಗಡಿ ಕಾಯುತ್ತಿರುವ ವೀರ ಯೋಧರ ಸ್ಮರಣೆಗಾಗಿ ಸ್ವಾತಂತ್ರೃ ದಿನಾಚರಣೆ ಪೂರ್ವಭಾವಿಯಾಗಿ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಯುವಮೋರ್ಚಾ ನೇತೃತ್ವದಲ್ಲಿ ತಿರಂಗಾ ಯಾತ್ರೆ ಅಂಗವಾಗಿ ತ್ರಾಸಿ ಬೀಚ್ ಪಾರ್ಕ್‌ನಲ್ಲಿ ಮಂಗಳವಾರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ವಿಜಯ ಕೊಡವೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಪ್ರಧಾನ ಕಾರ್ಯದರ್ಶಿಗಳಾದ ಕರಣ್ ಪೂಜಾರಿ, ಗೋಪಾಲ ಪೂಜಾರಿ, ಬೈಂದೂರು ಮಂಡಲ ಯುವಮೋರ್ಚಾ ಅಧ್ಯಕ್ಷ ವೇಣುಗೋಪಾಲ, ಉಪಾಧ್ಯಕ್ಷರಾದ ಚೇತನ್ ನಾಯ್ಕ, ಪ್ರದೀಪ ಉಪ್ಪುಂದ, ಪ್ರಧಾನ ಕಾರ್ಯದರ್ಶಿ ಜಯಂತ್ ಶೇರುಗಾರ್, ಕಾರ್ಯದರ್ಶಿಗಳಾದ ಸಚಿನ, ಮಂಜುನಾಥ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರೇಮಾ ಸಿ.ಎಸ್.ಪೂಜಾರಿ, ಮಾಲತಿ ನಾಯ್ಕ, ಡಾ.ಅತುಲ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಬಾಲಚಂದ್ರ ಭಟ್, ಸುರೇಶ ಬಟವಾಡೆ, ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ನೂರಾರು ಕಾರ್ಯಕರ್ತರು ಭಾಗಿ

ನಿವೃತ್ತ ಯೋಧ ದಿನಕರ ಶೆಣೈ ಅವರನ್ನು ಗೌರವಿಸಲಾಯಿತು. ತಿರಂಗಾ ಯಾತ್ರೆ ಮರವಂತೆಯ ಅರಮ ದೇವಸ್ಥಾನದ ಬಳಿಯಿಂದ ಆರಂಭಗೊಂಡು, ತ್ರಾಸಿ ಬೀಚ್ ಪಾರ್ಕ್ ಬಳಿ ಸಮಾಪನಗೊಂಡಿತು. ಸಂಜೆಯ ಮಳೆ ನಡುವೆಯೂ ನೂರಾರು ಕಾರ್ಯಕರ್ತರು ತ್ರಿವರ್ಣ ಧ್ವಜವನ್ನು ಹಿಡಿದು ಹೆಜ್ಜೆ ಹಾಕಿ ದೇಶದ ಮೇಲಿನ ತಮ್ಮ ಅಭಿಮಾನ ಹಾಗೂ ಗೌರವ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net